Thursday, 29 December 2011

ಅಪರಿಚಿತ ...

ಮನಸ್ಸಿನ ಮುಗಿಲಿನ ಮೇಲೆ ನೀ ಬರೆದೆ ...
ಕಾವ್ಯವೊಂದ ಮನಸಾರೆ ,,,,,,
ಆದರೆ ಅದನ್ನು ಬರೆದು ಬರಿದು ಮಾಡಿ ಹೋದೆ
ಏಕೆ ನನ್ನ ಮನಸ್ಸನ್ನು.???
ದಿನವೆಲ್ಲ ಕೆಣಕುತಿದೆ ನಿನ್ನಾ ನೆನಪುಗಳು ....
ನಿನ್ನ ಕಂಡ ತಕ್ಷಣ ತಲ್ಲಣಗೊಂಡೆ ನಾನು ...
ಮೈ ಮರೆತು ಮೂಕಳಾದೆ ....
ಅಲ್ಲೇ ನಿನ್ನ ಗೆಳತಿಯಾದೆ ....
ಬರಿದಾಗಿರುವ ಮನಕೆ ಸಾಂತ್ವನ ನೀಡು ಬಾ.....Sunday, 25 December 2011

ಹಾರಾಟ ......

ಬಾನೆತ್ತರಕೆ ಹಾರುತಿದೆ ಬೆಳ್ಳಕ್ಕಿ..........
ಕಣ್ತೆರೆದು ನೋಡಬಂದೆ ನಿನ್ನನ್ನು .....
ರವಿಯ ರಭಸದ ಕಿರಣಗಳು ..
ಕುಕ್ಕಿದೆ ಕಣ್ಣನ್ನು.... ಆದರೆ ಎಂದಿಗೂ 
ನಿಲ್ಲದು ....

ಮನದ ಹಕ್ಕಿಯ "ಹಾರಾಟ... "........Saturday, 24 December 2011

ಅಮ್ಮಾ.....

" ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?    ಅದು ನೀಡುವ ಶಾಂತಿ, ಕಾಂತಿ   ಯಾವ   ತಾರೆ, ರವಿಗಿದೆ ??"

             ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಮಗುವಿನ ಮೊದಲ ನುಡಿ "ಅಮ್ಮಾ...". ತಾಯಿ ಪ್ರಕೃತಿಯ  ಅಪೂರ್ವವಾದ ವರ. ಆ ಅಮ್ಮ ಶಬ್ಧದಲ್ಲಿ ಎಷ್ಟು   ವಾತ್ಸಲ್ಯ , ಪ್ರೀತಿ,ಆತ್ಮೀಯತೆ  ತುಂಬಿರುತ್ತದೆ ಅಲ್ವಾ?

                   ಸಂಸ್ಕೃತದಲ್ಲಿ " ಮಾತೃದೇವೋಭವ " ಎಂದು ತಾಯಿಗೇ ಅಗ್ರಸ್ಥ್ಹಾನ  ನೀಡಿದ್ದಾರೆ. ತಾಯಿಯ ಗರ್ಭದಲ್ಲಿ ಮಗು ಅಂಕುರಿಸಿದಾಗಲೇ  ಮಗುವಿನ ಮತ್ತು ತಾಯಿಯ ವಿಶಿಷ್ಟ ಭಾಂದವ್ಯ ಬೆಸೆಯತೊಡಗುತ್ತದೆ .

                              " ತಾಯೇ  ನಿನ್ನ  ಮಡಿಲಲಿ ಕಣ್ಣು ತೆರೆದ ಕ್ಷಣದಲಿ  ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ "
    ಮನುಷ್ಯ ತನ್ನ ಬಾಲ್ಯದಿಂದ  ಮುಪ್ಪಿನವರೆಗೂ  ತಾಯಿಯನ್ನು ಅವಲಂಬಿಸಿರುತ್ತಾನೆ. ಪ್ರತೀ ನೋವಿಗೂ ಮನುಷ್ಯನ ಮೊದಲ ಸ್ಪಂದನ "ಅಮ್ಮಾ.... ". ಮನುಷ್ಯ  ಎಷ್ಟೇ ದೊಡ್ಡವನಾದರೂ  ತಾಯಿಗೇ ಮಗುವೇ. ತಾಯಿಯ ಮಡಿಲಲ್ಲಿ ಸಿಗುವ ನೆಮ್ಮದಿ , ನಿರಾತಂಕ  ಎಲ್ಲಿ ಸಿಗಬಹುದು?  ತ್ಯಾಗ ,ಮಮತೆ ,ಪ್ರೀತಿ,ವಾತ್ಸಲ್ಯಗಳ  ಸಂಗಮ ಆಕೆ. "ಕ್ಷಮಯಾ ಧರಿತ್ರಿ " ಸಂಸಾರಕ್ಕಾಗಿ ತನ್ನ ಸುಖ  ಸಂತೋಷಗಳನ್ನೆಲ್ಲ  ತ್ಯಾಗ ಮಾಡುತ್ತಾಳೆ . ಅಂತಹ ಮಹತ್ತರ ಪಾತ್ರ ತಾಯಿಯದ್ದು . ಆಕೆಯ ವ್ಯಕ್ತಿತ್ವ ಮೇರು ಪರ್ವತದಂತೆ . ಸಂಸ್ಕೃತದ ಮಾತಿನಂತೆ " ಕುಪುತ್ರೋ ಜಾಯೇತ್ ಕ್ವಚಿದಪಿ ಕು ಮಾತಾ ನ ಭವತಿ " ಕೆಟ್ಟ ಮಕ್ಕಳನ್ನು ಕಾಣಬಹುದು , ಆದರೆ ಕೆಟ್ಟ ತಾಯಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ .

                        ಇಂಗ್ಲೀಷ್ ನಲ್ಲಿ ಒಂದು ಮಾತಿದೆ " god could not be everywhere , therefore he created 'mothers'..". ತಾಯಿ ಪ್ರತ್ಯಕ್ಷ ದೈವ. ಮಗುವಿನ ಒಂದು ನಗುವಿನಿಂದ ತನ್ನೆಲ್ಲ  ನೋವನ್ನು ಮರೆಯುತ್ತಾಳೆ .ಆ ಮಗುವಿಗಾಗಿ ತನ್ನೆಲ್ಲ ಬದುಕನ್ನು ಮುಡಿಪಾಗಿಡುತ್ತಾಳೆ.

                                            " ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧು ಇಲ್ಲ " ಎಂದು ನಮ್ಮ ಗಾದೆಕಾರರು ಹೇಳಿದ್ದಾರೆ.
                                           
                                            " ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು ".

                                              ಹೀಗೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಶಿಲ್ಪಿಯನ್ನಾಗಿ ಆಕೆಯನ್ನು ನಿರೂಪಿಸಿದ್ದಾರೆ. ಮಕ್ಕಳಿಗೆ ಮಮತೆಯ ಅಮ್ಮನಾಗುವ, ಗುರುವಾಗುವ ,ಸ್ನೇಹಿತೆಯಾಗುವ ,ಮಾರ್ಗದರ್ಶಿಯಾಗುವ ಆಕೆಯ 
ಹೃದಯ ವೈಶಾಲ್ಯತೆಯನ್ನು ಎಷ್ಟು ಹೇಳಿದರೂ ಕಡಿಮೆಯೇ ..

                                           ಗಂಧದ ಕೊರಡಿನಂತೆ ತನ್ನನ್ನು ತಾನು ತೇಯ್ದು ಪರಿಮಳ ಮಧುರತೆಯನ್ನು ಹರಡಿಸುವ ಅವಳ ಬದುಕಿಗೆ ನಾವು ಏನು ಹೋಲಿಸಿದರೂ ಕಡಿಮೆಯೇ . ಎಷ್ಟು ಹೇಳಿದರೂ ಸ್ವಲ್ಪವೇ .ಅವಳು ಅಳೆಯಲಾಗದ ಪ್ರೀತಿಯ ಸಮುದ್ರ . ವಾತ್ಸಲ್ಯದ ಸೋನೆಮಳೆ , ಮುಗಿಯದ ಮಮತೆಯ ಜಲಪಾತ . ಅವಳನ್ನು ವರ್ಣಿಸಲು ಪದಗಳೇ ಇಲ್ಲ.!!..

ಫ್ರೆಂಡ್ .......

ನೀನೇನು ಕೇಳಿಲ್ಲ , ನಾನೇನು ಹೇಳಿಲ್ಲ
ನಿನಗೆ ಎಲ್ಲವೂ ಅರ್ಥವಾಯಿತಲ್ಲ
ನನ್ನ ಮಾತನ್ನು ಕೆಳುವವರಿರಲಿಲ್ಲ
ನೀನು ಕಿವಿಗೊಟ್ಟು ಆಲಿಸಿದೆಯಲ್ಲ ..
ನೋವಾದಾಗ ಯಾರಿಗೂ ಹೇಳಲಿಲ್ಲ
ಆದರೆ ನೀನು ಅರಿತುಕೊಂಡೆಯಲ್ಲ..
ಕಣ್ಣಂಚಿನ ಹನಿ ಮುಚ್ಚಿಟ್ಟುಕೊಂಡೆನಲ್ಲ
ಅದ ನೀ ಮಾತ್ರ ಕಂಡುಕೊಂಡೆಯಲ್ಲ
ನಿನ್ನ ಕಣ್ಣು ನನಗಾಗಿ ಹೊಳೆದವು
ಹೃದಯಗಳು ಹೆಮ್ಮೆಯಿಂದ ಬೀಗಿದವು
ಅಳುವಿನ ಕಡಲಿಗೆ ನಗುವಿನ ಸಿಡಿಲಾದವು
ಒಳಗಿನ ನೋವಿಗೆ ಮಗುವಿನ ಮಡಿಲಾದವು
ನನ್ನ ಬಗ್ಗೆ ನಿನಗೆಲ್ಲವೂ ಗೊತ್ತಿದೆ
ನನ್ನ ನೋವುಗಳೂ ಗೊತ್ತಿದೆ
ನನ್ನ ನಲಿವುಗಳೂ ಗೊತ್ತಿವೆ
ನನ್ನ ಅಪಮಾನಗಳೂ ಗೊತ್ತಿವೆ
ನನ್ನ ಸನ್ಮಾನಗಳೂ ಗೊತ್ತಿವೆ
ನೀನು ನನ್ನಲ್ಲೇನು ಕೇಳಿಲ್ಲ
ನಾನು ಮುಚ್ಚಿಟ್ಟದ್ದೂ ಇಲ್ಲ
ಜಗತ್ತಿನ ಬಗ್ಗೆ ನಂಬಿಕೆ ಹುಟ್ಟಿಸಿದೆ
ನನ್ನೊಳಗೆ ಆತ್ಮ ವಿಶ್ವಾಸ ಹುಟ್ಟಿಸಿದೆ
ಮತ್ತು ಈ ಜಗತ್ತಿನಲ್ಲಿ ನಿಜವಾದ
ಗೆಳೆತನ ಬದುಕಿದೆ ಎಂದು ತೋರಿಸಿದೆ
ಸ್ನೇಹ  ಎಂದರೆ ನನ್ನ ನಿನ್ನ ನಡುವಿನ ಸೇತುವೆ
ನಿನಗೆ ಬೇಸರ ಅನಿಸಿದರೆ
ಏಕಾಂಗಿ ಅನಿಸಿದರೆ
ಅದನ್ನು ದಾಟಿ ಬಾ
ಇನ್ನೊಂದು ದಡದಲ್ಲಿ ನಾನು ಕಾಯುತ್ತಿರುವೆ
ಸ್ನೇಹವೆಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಂಡಿದೆ
ಆದರೆ ನನಗೆ ಕಂಡಿದ್ದು ನೀನಾಗಿ,ನೀನೆ ಆಗಿ ...
ಅದ್ಯಾಕೆ ಗೊತ್ತಾ??
ಅಂಥಹ ಸ್ನೇಹಕ್ಕೆ ನಾನು ಕಾದಿದ್ದೆ
ಅದೆಷ್ಟೋ ವರ್ಷಾಂತರ...
ಬಂದ ಗೆಳೆತನಕ್ಕೂ ನಾ
ಬಯಸಿದ್ದಕ್ಕು ಇತ್ತು ಅಂತರ ..
ನ ಬಯಸಿದ್ದು ನಿನ್ನಲ್ಲಿತ್ತು ಒಪ್ಪಿಕೊಂಡೆ ..
ಇದು ನಿರಂತರ
ಗೆಳೆತನವೆಂದರೆ ಹೃದಯದ ಮಿಡಿತ
ಅಂತಾ ಎಲ್ಲೋ ಕೇಳಿದ್ದೆ .
ನಿನ್ನ ಸಾನಿಧ್ಯದಲ್ಲಿ ಅದನ್ನು ಅನುಭವಿಸಿದೆ
ಏಕೆಂದರೆ ನಾನು ನೊಂದಾಗ
ನೀನು ಮರುಗುತ್ತಿದ್ದೆ
ನನಗೆ ನೋವಾದಾಗ
ನೀ ಕೊರಗುತ್ತಿದ್ದೆ..
ಸ್ನೇಹವೆಂದರೆ ಬರಿ ಸಂಭ್ರಮವಲ್ಲ
ನನ್ನ ಹನಿ ಕಣ್ಣೀರು ಕೂಡ ನಿನ್ನ ಕಣ್ಣ
ಬೆಳಕು ಬಿದ್ದಾಗ ಕಾಮನಬಿಲ್ಲಾಗಬೇಕು
ನನ್ನದೆಯ ಬಿರುಗಾಳಿಯಾ ಆರ್ಭಟ
ತಡೆವ ಗೋಡೆಯಾಗಬೇಕು .
ನನ್ನ ಆರ್ಥನಾದವನ್ನು ನೀನು
ಮಧುರ ಜೆಂಕಾರವಗಿಸಬೇಕು
ಎಂದು ಬಯಸಿದ್ದೆ ನಾನು
ನಿಜವಾಗಿ ಮೂಡಿಬಂದೆ ನೀನು
ಸಂತೋಷಕ್ಕೆ ಸಾವಿರ ಸ್ನೇಹಿತರಿರುತ್ತಾರೆ
ಸಂಕಟಕ್ಕೆ ಬರುವವರು ಯಾರಿರುತ್ತಾರೆ?
ಅಂತ ಯೋಚಿಸುತ್ತಿದ್ದೆ ನಾನು
ನೋವಿನಿಂದ ಕರುಳು ಚೀರಿದಾಗ
ಹೇಳದೆ ಪಕ್ಕದಲ್ಲಿದ್ದೆಯಲ್ಲ ನೀನು
ನಿಜವೆಂದರೆ ನನೋಬ್ಳು ಶುದ್ಧ ದಡ್ಡಿ ...
ಸ್ನೇಹವ ಬಯಸಿದಷ್ಟು ತೀವ್ರವಾಗಿ
ಮರಳಿಸುವುದರಲ್ಲಿ ಬರೀ ದಂಡ
ನನಗೇ ಕೆಲವೊಮ್ಮೆ ನೋವಾಗುತ್ತದೆ
ನಿನ್ನ ನೋಯಿಸಿದೆನಲ್ಲಾ  ಎಂದು
ಆದರೆ ನಿನ್ಯಾವತ್ತೂ ಪ್ರಶ್ನಿಸಲಿಲ್ಲ
ಹಾಗೇಕೆ ಎಂದು ಕೇಳಲಿಲ್ಲ
ಅರ್ಥಾ ಮಾಡ್ಕೋ  ಅನ್ನಲಿಲ್ಲ
ನೋವು ಮಾಡಿದರು ಮರುಗಲಿಲ್ಲ
ಯಾಕೆಂದರೆ ನನ್ನೊಳಗೆ ನಿನ್ನ "ಸ್ನೇಹಿತೆ "  ಇದ್ದಳಲ್ಲ
ನೀನು ಬದಲಾಗು ಎನ್ನಲಿಲ್ಲ
ಅವರಂತಾಗು, ಇವರಂತಾಗು ಎನ್ನಲಿಲ್ಲ
ನೀನು ನೀನಾಗು ಎಂದೆ.........
ಕೊನೆಯದಾಗಿ ಹೇಳೋದಿಷ್ಟೇ
ಥಾಂಕ್ಯೂ .....my dear friend.....

ಹೇಗೆ ಮರೆಯಲಿ ನಿನ್ನಾ??

ಮನಸೇ ಹೇಗೆ ಮರೆಯಲಿ ನಿನ್ನಾ?
ನೀನಾದೆ  ನನ್ನೀ ಬಾಳಿಗೆ ಉಸಿರು ..
ನೀನಾದೆ ಜೀವಕೆ ಹಸಿರು..
ಧೈರ್ಯ ತುಂಬಿದೆ ಮನಕೆ...
ಸ್ಪೂರ್ತಿಯ ಚಿಲುಮೆಯಾದೆ.... 
ಜೀವಕೆ ಜೀವವಾದೆ...
ಭಾವಕೆ ಭಾವನೆಯಾದೆ ...
ಜೀವನ ಸಮನ್ವಯತೆಯನ್ನು ತಿಳಿಸಿದೆ ...
ಮನಸೇ ... ಹೇಗೆ ಮರೆಯಲಿ ನಿನ್ನಾ????.......