Tuesday, 18 February 2014

ಕನಸು...ನನಸು

 ಕನಸಿನ ಕನ್ನಡಿಯಲ್ಲಿ ಕಾಣುವುದೆಲ್ಲ  
 ಸತ್ಯ-ಮಿಥ್ಯಗಳ ತೊಳಲಾಟ .... 
 ಕನಸಿನ ಬದುಕಿಗೆ ಆಸೆ .. 
 ದುರಾಸೆಗಳೆಷ್ಟೋ .... 
 ಕನಸಿಲ್ಲದಿದ್ದರೂ.... 
 ಬದುಕು ನಶ್ವರ .... 
 ಕನಸೇ ನಿಜವೆಂದು ಬದುಕಿದರೆ ?
 ಬದುಕು ಮೂರ್ಖತೆಯ ಪರಮಾವದಿ ...!!!
ಕನಸೇ ಬೇಡ ಎಂದರೆ 
ಕಣ್ಣು ಕೇಳಬೇಕಲ್ಲ .....!!!
ಕನಸು ನನಸಿನ ಪರಿದಿಯಲ್ಲಿ 
ಸುಖ ದುಃಖಗಳ ಎಡ ಬಲಗಳಲ್ಲಿ 
ಬದುಕಿನ ಪಯಣ .....