Saturday, 27 October 2012

ಬದಲಾವಣೆ ...

ಮಳೆಗಾಲ  ಮುಗಿದು  ಚಳಿಗಾಲ ಬಂದಾಗ
ಮರಗಿಡಗಳು ಬದಲಾದವು ..
ಹಗಲು ಕಳೆದು  ರಾತ್ರಿ ಬಂದಾಗ
ಸೂರ್ಯ ಚಂದ್ರರು ಬದಲಾದರು ..
ಎಂದಿಗೂ ಬದಲಾಗಲಾರೆ ಎಂದಿದ್ದ ನಾನು
ಓ ಗೆಳೆಯ ನೀ  ನನ್ನ ಬಾಳಿಗೆ ಬಂದಾಗ
ನಾನೇ ಬದಲಾಗಿ ನೀನಾದೆನಲ್ಲ !!!!!
ಬದಲಾವಣೆ ಜಗದ ನಿಯಮವೇ ಸರಿ ....


facebook.......


ಕಣ್ಣೆದುರಿಗಿದ್ದರೂ ಗುರುತಿಸಲಾಗಲಿಲ್ಲ..
ಹತ್ತಿರವಿದ್ದರೂ ಮಾತನಾಡಿಸಲಾಗಲಿಲ್ಲ..
ಇಷ್ಟವಿದ್ದರೂ ಪ್ರೀತಿ ತಿಳಿಸಲಾಗಲಿಲ್ಲ..
facebook ಮಹಿಮೆಯಿಂದ,
ಓ ಗೆಳೆಯ ಎರಡೇ ತಿಂಗಳಿಗೆ,
ಮದುವೆ ಆಯಿತಲ್ಲ...