Monday 28 May 2012

ಮುಗ್ದತೆ ಮತ್ತು ಮೂರ್ಖತೆ .........


ಒಂದೂರಲ್ಲಿ  ಒಬ್ಬ  ರೈತ  ತನ್ನ  ಕುಟುಂಬದ  ಜೊತೆ ವಾಸವಾಗಿದ್ದಅವನಿಗೆ ನಾಲ್ಕು ಜನ  ಮಕ್ಕಳುಮೂರು ಜನ  ಹೆಣ್ಮಕ್ಳುಕೊನೆಯಲ್ಲಿ ಒಬ್ಬ  ಮಗಹೊಲದಲ್ಲಿ   ಬೆಳೆಯುವ   ಬೆಳೆಗೆ  " ಬೆಲೆಬಂದರೆ  ಮಾತ್ರ,  ಅವನ   ಸಂಸಾರ   ಮೂರು ಹೊತ್ತು ಊಟ   ಮಾಡಬಹುದಿತ್ತುಒಟ್ಟಿನಲ್ಲಿ  ಹೇಳಬೇಕೆಂದರೆ  ಕಲಿಯುಗದಸುದಾಮ "  ಎನ್ನಬಹುದು .

                                                            ಅವನಿಗೆ  ತನ್ನ  ಮಕ್ಕಳು  ಚೆನ್ನಾಗಿ ಓದಿ  ಒಳ್ಳೆ ಹುದ್ದೆಯನ್ನು ಅಲಂಕರಿಸಬೇಕೆಂದು ಮಹಾದಾಸೆಯಿತ್ತುಹಿರಿಯ   ಮಗಳು "ಮೇಧಾ"  , ಹೆಸರಿಗೆ  ತಕ್ಕಂತೆ  ತುಂಬಾ ಜಾಣೆಯುತಾಳ್ಮೆ ಉಳ್ಳವಳು  ಆಗಿದ್ದಳು .ಅವಳು ಶಾಲೆಯಲ್ಲಿಯೂ  ಆದರ್ಶ  ವಿದ್ಯಾರ್ಥಿನಿ ಆಗಿದ್ದಳುಅವಳು ಎಲ್ಲಾ   ಸ್ಪರ್ದೆಗಳಲ್ಲೂ  ಮೊದಲ   ಸ್ಥಾನಗಳಿಸುತ್ತಿದ್ದಳು .ಎಲ್ಲಾ  ಶಿಕ್ಷಕರಿಗೂ  ಅಚ್ಚುಮೆಚ್ಚಾಗಿದ್ದಳುಅವಳು ಚೆನ್ನಾಗಿ ಓದುತ್ತಿದ್ದರಿಂದ  ಅವಳ  ಓದಿನ  ಖರ್ಚೆಲ್ಲ   ಅವಳ  "ಸ್ಕೊಲರ್ಶಿಪ್ "ನಲ್ಲೇ  ಪೂರೈಸುತ್ತಿದ್ದಳುಅಪ್ಪನಿಗೆ  ಮೇಧಾ ಎಂದರೆ ತುಂಬಾ  ಹೆಮ್ಮೆ.

                                                ಎರಡನೇ  ಮಗಳು  "ಮಂಗಳ " , ತುಂಬಾ ಚೂಟಿದಿನಾಲೂ ತಾಯಿಗೆ  ಮನೆಗೆಲಸದಲ್ಲಿ   ಸಹಾಯ  ಮಾಡುತ್ತಾ ,   ಅಮ್ಮನ  ಮುದ್ದಿನ   ಮಗಳಾಗಿದ್ದಳುಮೂರನೆಯವಳು  " ಮಂದಾರ "  ನಾಲ್ಕು ವರ್ಷದವಳು  , ಇನ್ನು ಕೊನೆಯ  ಮಗ  ಎಂಟು ತಿಂಗಳ   ಹಸುಗೂಸು .

ವರ್ಷಗಳು  ಕಳೆಯುತ್ತಿದ್ದ  ಹಾಗೆ  ಮಕ್ಕಳ  ಮನಸ್ಸು   ಬದಲಾಗುತ್ತ  ಹೋಯಿತು.

                                                   ದೊಡ್ಡ   ಮಗಳು  ಕಾಲೇಜಿಗೆ  ಹೋಗುತ್ತಿದ್ದಳು .  ಮಕ್ಕಳಿಗೆ  ಬಡತನದ   ಜೀವನ   ಬೇಸತ್ತಿ  ಹೋಗಿತ್ತು...  ತಮ್ಮ   ವಾರಿಗೆಯ  ಉಳಿದ  ಮಕ್ಕಳನ್ನು  ನೋಡಿ  ನಾವೂ  ಹಾಗೆ ಇರಬೇಕೆಂದುಕೊಳ್ಳುತ್ತಿದ್ದರು ..  ಆದರೆ  ಬಡತನದ   ಪೆಡಂಭೂತ   ಬೆಂಬಿಡದೆ  ಕಾಡುತ್ತಿತ್ತುಎಲ್ಲ   ತಂದೆ, ತಾಯಿಯರೂ  ತಮ್ಮ   ಮಕ್ಕಳನ್ನು  ಸಮಾನವಾಗಿ  ಪ್ರೀತಿಯಿಂದ   ನೋಡಿಕೊಳ್ಳುತ್ತಾರೆಸಮಾನವಾಗಿ  ವಾತ್ಸಲ್ಯ   ತೋರಿಸುತ್ತಾರೆಆದರೆ ಮಕ್ಕಳು   ಅದನ್ನು  ಅರ್ಥಮಾಡಿಕೊಳ್ಳುವುದಿಲ್ಲ  !!!

                                                             ಮೇಧಾ   ದೊಡ್ದವಳಾದ್ದರಿಂದ   ತಂದೆತಾಯಿಯರು  ಅವಳ  ಬಗ್ಗೆ  ಗಮನ ಕಡಿಮೆ ಮಾಡಿದರು .  ಅವಳು ಎಲ್ಲವನ್ನು  ಚೆನ್ನಾಗಿ  ನಿಭಾಯಿಸ   ಬಲ್ಲಳು  ಎಂಬ   ನಂಬಿಕೆಯಿಂದ .....

                                                                ಮೇಧಾ  ತನ್ನ  ಉನ್ನತ  ವ್ಯಾಸಂಗಕ್ಕಾಗಿ   ಬೆಂಗಳೂರಿಗೆ  ಬಂದಳು . ಅಲ್ಲಿ  ಹಾಸ್ಟೆಲ್   ನಲ್ಲಿ   ಉಳಿಯ  ಬೇಕಾಯಿತು .  ಹೊಸ  ಗೆಳತಿಯರು , ಹೊಸಾ  ವಾತಾವರಣ , ಹೊಸ  ಊಟ ... ಎಲ್ಲದಕ್ಕೂ   ಹೊಂದಿಕೊಳ್ಳಲು  ತಿಂಗಳವೆ .. ಆಗಿಹೋಯಿತು .   ಮೇಧಾ   ತುಂಬಾ  ಶಾಂತ   ಸ್ವಭಾವದವಳಾಗಿದ್ದಳು , ಕ್ಲಾಸಿನಲ್ಲಿಯೂ 
ಯಾರೊಂದಿಗೂ ಹೆಚ್ಚಾಗಿ   ಹರಟುತ್ತಿರಲಿಲ್ಲ . ಅವಳಿಗೆ   ಯಾರೂ  ಆತ್ಮೀಯ  ಗೆಳತಿಯರು  ಇರಲಿಲ್ಲ.              

                                                                     ಮೇಧಾಳಿಗೆ   ಒಂಟಿತನ   ಕಾಡುತ್ತಿತ್ತು .  ಮನಸ್ಸಿನ  ಭಾವನೆಗಳನ್ನು   ಹೇಳಿಕೊಳ್ಳಲು   ಯಾರೂ  ಇಲ್ಲದ  ಪರಿಸ್ಥಿತಿ !!!!   ಅಪ್ಪ , ಅಮ್ಮನಿಗೆ  ಹೇಳಿಕೊಳ್ಳೋಣ  ಎಂದರೆ   ಅವರ  ಸಮಸ್ಯೆಯ  ಮುಂದೆ  ಮಗಳ   ಮಾತು  ಕೇಳಲು  ಪುರುಸೊತ್ತೇ  ಇರುತ್ತಿರಲಿಲ್ಲ ......

                                                                   ಒಂದು  ದಿನ  ಮೇಧಾ  ಕಾಲೇಜ್  ಎದುರಿನ  ಪಾರ್ಕಿನಲ್ಲಿ  ಒಂಟಿಯಾಗಿ  ಕುಳಿತು   ಏನೋ  ಓದುತ್ತಿದ್ದಳು .   ಆಗ  ಅವಳಿಗೆ  "ಮೋಹನ್   ಪರಿಚಯವಾಯಿತುಮೋಹನ್  ಒಳ್ಳೆಯ   ಹುಡುಗಬುದ್ಧಿವಂತ  ಕೂಡಇಬ್ಬರು ಸ್ನೇಹಿತರಾದರುಮೊದಮೊದಲು  ಅವಳು   ಹೆಚ್ಚೇನು  ಮಾತನಾಡುತ್ತಿರಲಿಲ್ಲ  .  ಆದರೆ  ಮೋಹನ್   ಒಳ್ಳೆಯ  ಮಾತುಗಾರ .  ಮಾತನಾಡದವರನ್ನು  ಮಾತಾಡುವಂತೆ  ಮಾಡುತ್ತಿದ್ದ !!

                                                                     ಮೋಹನ್   ಮೇಧಾಳಿಗೆ  ಒಳ್ಳೆಯ  ಸ್ನೇಹಿತನಾದ .  ಇಬ್ಬರೂ   ದಿನಾಲೂ  ಸೆಂಜೆಯೆಲ್ಲ  ಮಾತನಾಡಿಯೇ   ತಮ್ಮ  ತಮ್ಮ     ಹಾಸ್ಟೆಲ್  ಗೆ ಮರಳುತ್ತಿದ್ದರು .  ಮೇಧಾ  ನಿಧಾನವಾಗಿ  ಮೋಹನ್    ಮೇಲೆ   ಅವಲಂಬಿತಳಾಗತೊಡಗಿದಳುತನ್ನ  ಎಲ್ಲಾ  ದುಖಃ , ಸಂತೋಷಗಳನ್ನೂ  ಅವನ ಬಳಿ ಹೇಳಿಕೊಳ್ಳಲಾರಂಬಿಸಿದಳು. ಅವನೂ  ಇವಳ  ಮನಸ್ಸಿನ ಭಾವನೆಗಳಿಗೆ ಸ್ಪಂದಿಸುತ್ತಿದ್ದ.

                                 ಅವರ ಸ್ನೇಹ ಹೆಚ್ಚು ದಿನ ಸ್ನೇಹವಾಗಿ ಉಳಿಯಲಿಲ್ಲ.!!!
ಅವನು ಅವಳನ್ನು ಪ್ರೇಮಿಸುವುದಾಗಿ  ಹೇಳಿದ. ಅವಳ  ಆನಂದಕ್ಕೆ  ಪಾರವೇ  ಇರಲಿಲ್ಲ ... ಅವಳ  ಮನಸ್ಸು ಇಷ್ಟು ದಿನ ನಿಂತ ನೀರಾಗಿತ್ತು.. ಈಗ  ಸಮುದ್ರವನ್ನು ಸೇರಲು ಓಡುತ್ತಿರುವ ನದಿಯಂತಾಯಿತು. ಅವಳಿಗೆ  ಹೊಸ ಜಗತ್ತೊಂದು ಬಾಗಿಲು ತೆರೆದು  ಬಾ ಎಂದು ಕೈ ಚಾಚಿ ಕರೆಯುತ್ತಿರುವಂತೆ ಭಾಸವಾಯಿತು.. ಮೆಧಾ ತನ್ನ ಹಳೆಯ ಜೀವನವನ್ನು (ತಂದೆ,ತಾಯಿಯನ್ನು) ಮರೆತೇ ಬಿಟ್ಟಳು.. ಮೊಹನ್ ನ ಪ್ರೀತಿಯ ಕಡಲಲ್ಲಿ ಈಜುವ ಮೀನಾದಳು.

                                   ಮೊಹನ್ ಕೂಡ ಮೆಧಾಳನ್ನು ಯತೇಛ್ಛವಾಗಿ ಪ್ರೀತಿಸುತ್ತಿದ್ದಅವಳ ಜೊತೆ ಮಾತನಾಡದೇ ಒಂದು ದಿನವೂ  ಇರುತ್ತಿರಲಿಲ್ಲ. ಅವಳನ್ನು ನಗಿಸುತ್ತ ತಾನೂ ನಗುತ್ತ ಪ್ರೀತಿಯ ಮಾಯೆಯಲ್ಲಿ ಸಿಲುಕಿದ್ದನು. ಅವನು ಅವಳಿಗೋಸ್ಕರ  ಎನನ್ನು ಕೂಡ ಮಾಡಲು ತಯಾರಿದ್ದನು.

                                    ಒಂದು ದಿನ ಮೊಹನ್ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು ಕಾಲು ಪೆಟ್ಟುಮಾಡಿಕೊಂಡನು!!.. ಈ ವಿಷಯವನ್ನು ಕೇಳಿದ ಮೆಧಾ  ಅಳುತ್ತಾ  ಮೊಹನ್ ಗೆ ಪೋನ್ ಮಾಡಿದಳು. ಅವನ ಧ್ವನಿ ಇವಳಿಗೆ ಸಾಂತ್ವನ ನೀಡಿತ್ತು. ಅವಳು ಅವನ ಯೋಗಕ್ಷೇಮ ವಿಚಾರಿಸಿದಳು. ಅವನಿಗೆ ಹೆಚ್ಚೇನು ಪೆಟ್ಟಾಗದ ಕಾರಣ ಅವನನ್ನು ನೋಡಲು ಹೊಗಲಿಲ್ಲ.

                                  ಮಾರನೆ ದಿನ ಮೊಹನ್  ಮೆಧಾಳಿಗೆ  ಪೋನ್ ಮಾಡಿದ್ದ.
ಇವಳು ಖುಷಿಯಿಂದ ಮಾತಡಿದಳು.. ಆದರೆ ಮೊಹನ್ ನ ಯೋಚನೆಯೆ ಬೇರೆಯಾಗಿತ್ತು.
ಅವನು ಎಂದಿನಂತೆ ಇರಲಿಲ್ಲ...ಜಗಳವಾಡಲು ಪೋನ್ ಮಾಡಿದಂತಿತ್ತು.. ಇವಳು ಅದನ್ನು ನಿರೀಕ್ಷಿಸಿರಲಿಲ್ಲ.

                                  ಮೆಧಾ ,ಮೊಹನ್ ನನ್ನು  ನೋಡಲು ಹೊಗಲಿಲ್ಲ ಎಂಬ  ಕಾರಣಕ್ಕೆ
ಇಬ್ಬರ ನಡುವೆ ಜಗಳ ನದೆದಿತ್ತು...ಮೊಹನ್ ಕೇಳಿದ  ನನಗೋಸ್ಕರ ಹೊಸ್ಟೆಲ್ ಗೆ ಬರದವಳು ನನ್ನ
ಪ್ರೀತಿ ಮಾಡುವುದು ನಿಜವಾ??” ಮೆಧಾ ಇದ್ಯಾವುದನ್ನು ತಿಳಿಯದ ಮುಗ್ದೆಯಂತೆ ಅವನ ಮಾತುಗಳನ್ನು ಕೇಳುತ್ತ ಅಳುತ್ತಿದ್ದಳು...

                                     “ಹೇಳು ನಾನೇನು ಮಾಡಬೇಕುಎಂದು ಕೇಳಿದಳು ಮೆಧಾ..
ಅವನು ಸಿಟ್ಟಿನ ರಭಸದಲ್ಲಿ ಹೊಸ್ಟೆಲ್ ಮಹಡಿಯಿಂದ  ಕೆಳಕ್ಕೆ ಹಾರು.. ನಂಬ್ತೀನಿ ನಿನ್ನ”..... ಎಂದ.
ಪಾಪ ಅವಳು ಏನನ್ನೂ ಯೋಚಿಸದೆ ಕೆಳಕ್ಕೆ ಹಾರಿದಳು.....

                                   ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದ ದೋಣಿ ಮುಳುಗಿತ್ತು!!! ಮೆಧಾಳ ಪ್ರಾಣಪಕ್ಷಿ ಹಾರಿಹೋಗಿತ್ತು......


                                    ಸ್ನೇಹಿತರೆ ಇದನ್ನು ಮೆಧಾಳ ಮುಗ್ದತೆ ಎನ್ನಬೇಕೋ??? ಅಥವಾ  ಮೂರ್ಖತನವೆನ್ನಬೇಕೋ???  ನಿಮ್ಮ  ಅಭಿಪ್ರಾಯ ತಿಳಿಸಿ...........







2 comments:

  1. ಸಮನ್ವಯ ಭಟ್ ಆವರೆ,
    ಕತೆ ಮನಸ್ಸಿನಾಳಕ್ಕೆ ಮುಟ್ಟಿತು.
    ಇದನ್ನು ಮುಗ್ಧತೆ ಎಂದು ಹೇಳಿದರೆ ಇಂದಿನ ಯುವ ಜನಾಂಗಕ್ಕೆ ಅವಮಾನ!
    ಇನ್ನು ಮೂರ್ಖತನ ಎಂದೇ ಹೇಳಬೇಕಾಗುತ್ತದೆ. ಪ್ರೀತಿಯೇ ಸರ್ವಸ್ವ ಎಂದುಕೊಂಡು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದು ಮೂರ್ಖ ತಾಣವೇ ಸರಿ.

    ReplyDelete