Saturday 24 December 2011

ಫ್ರೆಂಡ್ .......

ನೀನೇನು ಕೇಳಿಲ್ಲ , ನಾನೇನು ಹೇಳಿಲ್ಲ
ನಿನಗೆ ಎಲ್ಲವೂ ಅರ್ಥವಾಯಿತಲ್ಲ
ನನ್ನ ಮಾತನ್ನು ಕೆಳುವವರಿರಲಿಲ್ಲ
ನೀನು ಕಿವಿಗೊಟ್ಟು ಆಲಿಸಿದೆಯಲ್ಲ ..
ನೋವಾದಾಗ ಯಾರಿಗೂ ಹೇಳಲಿಲ್ಲ
ಆದರೆ ನೀನು ಅರಿತುಕೊಂಡೆಯಲ್ಲ..
ಕಣ್ಣಂಚಿನ ಹನಿ ಮುಚ್ಚಿಟ್ಟುಕೊಂಡೆನಲ್ಲ
ಅದ ನೀ ಮಾತ್ರ ಕಂಡುಕೊಂಡೆಯಲ್ಲ
ನಿನ್ನ ಕಣ್ಣು ನನಗಾಗಿ ಹೊಳೆದವು
ಹೃದಯಗಳು ಹೆಮ್ಮೆಯಿಂದ ಬೀಗಿದವು
ಅಳುವಿನ ಕಡಲಿಗೆ ನಗುವಿನ ಸಿಡಿಲಾದವು
ಒಳಗಿನ ನೋವಿಗೆ ಮಗುವಿನ ಮಡಿಲಾದವು
ನನ್ನ ಬಗ್ಗೆ ನಿನಗೆಲ್ಲವೂ ಗೊತ್ತಿದೆ
ನನ್ನ ನೋವುಗಳೂ ಗೊತ್ತಿದೆ
ನನ್ನ ನಲಿವುಗಳೂ ಗೊತ್ತಿವೆ
ನನ್ನ ಅಪಮಾನಗಳೂ ಗೊತ್ತಿವೆ
ನನ್ನ ಸನ್ಮಾನಗಳೂ ಗೊತ್ತಿವೆ
ನೀನು ನನ್ನಲ್ಲೇನು ಕೇಳಿಲ್ಲ
ನಾನು ಮುಚ್ಚಿಟ್ಟದ್ದೂ ಇಲ್ಲ
ಜಗತ್ತಿನ ಬಗ್ಗೆ ನಂಬಿಕೆ ಹುಟ್ಟಿಸಿದೆ
ನನ್ನೊಳಗೆ ಆತ್ಮ ವಿಶ್ವಾಸ ಹುಟ್ಟಿಸಿದೆ
ಮತ್ತು ಈ ಜಗತ್ತಿನಲ್ಲಿ ನಿಜವಾದ
ಗೆಳೆತನ ಬದುಕಿದೆ ಎಂದು ತೋರಿಸಿದೆ
ಸ್ನೇಹ  ಎಂದರೆ ನನ್ನ ನಿನ್ನ ನಡುವಿನ ಸೇತುವೆ
ನಿನಗೆ ಬೇಸರ ಅನಿಸಿದರೆ
ಏಕಾಂಗಿ ಅನಿಸಿದರೆ
ಅದನ್ನು ದಾಟಿ ಬಾ
ಇನ್ನೊಂದು ದಡದಲ್ಲಿ ನಾನು ಕಾಯುತ್ತಿರುವೆ
ಸ್ನೇಹವೆಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಂಡಿದೆ
ಆದರೆ ನನಗೆ ಕಂಡಿದ್ದು ನೀನಾಗಿ,ನೀನೆ ಆಗಿ ...
ಅದ್ಯಾಕೆ ಗೊತ್ತಾ??
ಅಂಥಹ ಸ್ನೇಹಕ್ಕೆ ನಾನು ಕಾದಿದ್ದೆ
ಅದೆಷ್ಟೋ ವರ್ಷಾಂತರ...
ಬಂದ ಗೆಳೆತನಕ್ಕೂ ನಾ
ಬಯಸಿದ್ದಕ್ಕು ಇತ್ತು ಅಂತರ ..
ನ ಬಯಸಿದ್ದು ನಿನ್ನಲ್ಲಿತ್ತು ಒಪ್ಪಿಕೊಂಡೆ ..
ಇದು ನಿರಂತರ
ಗೆಳೆತನವೆಂದರೆ ಹೃದಯದ ಮಿಡಿತ
ಅಂತಾ ಎಲ್ಲೋ ಕೇಳಿದ್ದೆ .
ನಿನ್ನ ಸಾನಿಧ್ಯದಲ್ಲಿ ಅದನ್ನು ಅನುಭವಿಸಿದೆ
ಏಕೆಂದರೆ ನಾನು ನೊಂದಾಗ
ನೀನು ಮರುಗುತ್ತಿದ್ದೆ
ನನಗೆ ನೋವಾದಾಗ
ನೀ ಕೊರಗುತ್ತಿದ್ದೆ..
ಸ್ನೇಹವೆಂದರೆ ಬರಿ ಸಂಭ್ರಮವಲ್ಲ
ನನ್ನ ಹನಿ ಕಣ್ಣೀರು ಕೂಡ ನಿನ್ನ ಕಣ್ಣ
ಬೆಳಕು ಬಿದ್ದಾಗ ಕಾಮನಬಿಲ್ಲಾಗಬೇಕು
ನನ್ನದೆಯ ಬಿರುಗಾಳಿಯಾ ಆರ್ಭಟ
ತಡೆವ ಗೋಡೆಯಾಗಬೇಕು .
ನನ್ನ ಆರ್ಥನಾದವನ್ನು ನೀನು
ಮಧುರ ಜೆಂಕಾರವಗಿಸಬೇಕು
ಎಂದು ಬಯಸಿದ್ದೆ ನಾನು
ನಿಜವಾಗಿ ಮೂಡಿಬಂದೆ ನೀನು
ಸಂತೋಷಕ್ಕೆ ಸಾವಿರ ಸ್ನೇಹಿತರಿರುತ್ತಾರೆ
ಸಂಕಟಕ್ಕೆ ಬರುವವರು ಯಾರಿರುತ್ತಾರೆ?
ಅಂತ ಯೋಚಿಸುತ್ತಿದ್ದೆ ನಾನು
ನೋವಿನಿಂದ ಕರುಳು ಚೀರಿದಾಗ
ಹೇಳದೆ ಪಕ್ಕದಲ್ಲಿದ್ದೆಯಲ್ಲ ನೀನು
ನಿಜವೆಂದರೆ ನನೋಬ್ಳು ಶುದ್ಧ ದಡ್ಡಿ ...
ಸ್ನೇಹವ ಬಯಸಿದಷ್ಟು ತೀವ್ರವಾಗಿ
ಮರಳಿಸುವುದರಲ್ಲಿ ಬರೀ ದಂಡ
ನನಗೇ ಕೆಲವೊಮ್ಮೆ ನೋವಾಗುತ್ತದೆ
ನಿನ್ನ ನೋಯಿಸಿದೆನಲ್ಲಾ  ಎಂದು
ಆದರೆ ನಿನ್ಯಾವತ್ತೂ ಪ್ರಶ್ನಿಸಲಿಲ್ಲ
ಹಾಗೇಕೆ ಎಂದು ಕೇಳಲಿಲ್ಲ
ಅರ್ಥಾ ಮಾಡ್ಕೋ  ಅನ್ನಲಿಲ್ಲ
ನೋವು ಮಾಡಿದರು ಮರುಗಲಿಲ್ಲ
ಯಾಕೆಂದರೆ ನನ್ನೊಳಗೆ ನಿನ್ನ "ಸ್ನೇಹಿತೆ "  ಇದ್ದಳಲ್ಲ
ನೀನು ಬದಲಾಗು ಎನ್ನಲಿಲ್ಲ
ಅವರಂತಾಗು, ಇವರಂತಾಗು ಎನ್ನಲಿಲ್ಲ
ನೀನು ನೀನಾಗು ಎಂದೆ.........
ಕೊನೆಯದಾಗಿ ಹೇಳೋದಿಷ್ಟೇ
ಥಾಂಕ್ಯೂ .....my dear friend.....

2 comments:

  1. ತುಂಬಾ ಸುಂದರ ಸಾಲುಗಳು...

    ಮುಂದುವರೆಸಿ.....

    ReplyDelete