Tuesday, 13 November 2012

ಶಾಲೆ ಮಾಸ್ತರು - 1

                                                                 ನಮ್ಮದು ಅಘನಾಶಿನಿ ನದಿಯ ಪಕ್ಕದ ಪುಟ್ಟ ಹಳ್ಳಿ.ಹಳ್ಳಿಯ ಹೆಸರು "ಹಿತ್ಲಕೈ". ಅಲ್ಲಿ ಒಂದು ಪುಟ್ಟ ಶಾಲೆ. ನಾವೆಲ್ಲ ಓದಿದ್ದು ಅಲ್ಲೇ ... ಶಾಲೆಗೆ  "6" ಜನ ಮಕ್ಕಳು. ನಮ್ಮ ಶಾಲೆಗೆ ಯಾವ ಶಿಕ್ಷಕರೂ ಬರಲು ಒಪ್ಪುತ್ತಿರಲಿಲ್ಲವೋ  ಅಥವಾ ಶಿಕ್ಷಣ ಇಲಾಖೆಯ ಆಲಸ್ಯವೋ ಗೊತ್ತಿಲ್ಲ , ವರ್ಷದಲ್ಲಿ  ನಾಲ್ಕು ತಿಂಗಳು ಹಾಗೋ ಹೀಗೋ ಶಾಲೆಯ ಬಾಗಿಲು ತೆರೆದಿರುತ್ತಿತ್ತು .ಊರಿನಲ್ಲೇ ಸ್ವಲ್ಪ ಓದಿದವರು ಶಾಲೆಗೇ ಬಂದು ಪಾಠ ಹೇಳಿಕೊಡುತ್ತಿದ್ದರು.ನಮ್ಮ ಅಕ್ಕ, ಅಣ್ಣ , ಚಿಕ್ಕಪ್ಪ , ಅಪ್ಪ  ಇವರುಗಳೇ ನಮ್ಮ ಶಿಕ್ಷಕರು.ದಿನಾಲೂ ಒಬ್ಬೊಬ್ಬರು ಹೇಳಿಕೊಡುತ್ತಿದ್ದರು. ಅಂದಿನ ಅಭ್ಯಾಸ ಅಂದೇ ಮಾಡದಿದ್ದರೆ ಶಿಕ್ಷೆಯೂ ಅಷ್ಟೇ ಕಠಿಣವಾಗಿರುತ್ತಿತ್ತು!!!!.


                                                                 ಒಂದು ದಿನ ಊರಿನವರೆಲ್ಲ " ಶಾಲೆಗೆ  ಹೊಸ ಮಾಸ್ತರು ಬರ್ತಾರಂತೆ"!!!!! ಎಂದು ಸುದ್ದಿ ಹಬ್ಬಿಸಿದರು . ನಮಗೆಲ್ಲ ಭಯ ,ದುಃಖ ಎಲ್ಲ ಒಟ್ಟೊಟ್ಟಿಗೆ.....ನಾನು ಅಮ್ಮನ ಬಳಿ "ಆಯಿ ನಂಗೆ ನಾಳೆ ಜ್ವರ ಬತ್ತು, ನಾ ಶಾಲೆಗೆ ಹೊಗ್ತ್ನಿಲ್ಲೆ" ಎಂದು ಹಠ ಮಾಡಿದೆ. ಎಲ್ಲಾ ಮಕ್ಕಳದ್ದೂ ಹೀಗೆ, ಒಂದೊಂದು ಹಠ. ಎಷ್ಟೆಂದರೂ ಮಕ್ಕಳೆಲ್ಲಾ "ಒಗ್ಗಟ್ಟಿನಲ್ಲಿ ಬಲವಿದೆ" ಪಾಠ ಕಲಿತವರು
                                                       

                                                                ಅಂದು ಶುಕ್ರವಾರ, ಮಾಸ್ತರು ಬರುತ್ತಾರೆ ಬಸ್ಸಿಗೆ ಎಂದು ಕಾಯುತ್ತಾ, ಊರವರು, ಮಕ್ಕಳು, ಬಾಯಿತೆರೆದು ಕಾಯುತ್ತಿದ್ದಾರೆ. ನಾನು ಶಾಲೆಯಲ್ಲಿ ಎಲ್ಲರಿಗಿಂತ ದೊಡ್ಡವಳಾದ್ದರಿಂದ ಎಲ್ಲರೂ "ಅಕ್ಕಾ" ಎನ್ನುತ್ತಿದ್ದರು. ನಾನು ಎಲ್ಲರನ್ನೂ (ಶಾಲೆ ಮಕ್ಕಳನ್ನು) ಕರೆದು, "ಇವತ್ತು ಬಸ್ಸು ಬರೋದೆ ಬೇಡಾ ಹೇಳಿ ದೇವರಹತ್ರ ಕೇಳಿಕೊಳ್ಳೋಣ, ಬಸ್ಸು ಬರದೆ ಇದ್ರೆ ಮಾಸ್ತರು ಹೆಂಗೆ ಬತ್ರು?" ಎಂದೆ. ಇನ್ನೇನು ಎಲ್ಲರೂ ತಮ್ಮ ತಮ್ಮ ಪ್ರಾರ್ಥನೆ ಶುರು ಮಾಡುವುದರೊಳಗೆ ಬಸ್ಸು ಬಂದೇ ಬಿಡ್ತು. ಎಲ್ಲಾರೂ ಹೊಸ ಮಾಸ್ತರ ಸ್ವಾಗತಕ್ಕೆ ನಿಂತಿದ್ದಾರೆ..... ಬಸ್ ಡ್ರೈವರ್ ಹೇಳ್ದ "ಮಾಸ್ತರು ಸೋಮವಾರದಿಂದ ಬರ್ತ್ರಂತೆ" ........................
                                    

                
                                                              ದೊಡ್ಡವರಿಗೆಲ್ಲಾ ನಿರಾಶೆ.............. ನಮಗೆ ಮಾತ್ರ ಹಾಲಿಗೆ ಜೇನು ಬೆರೆಸಿ ಕುಡಿದಷ್ಟು ಖುಶಿ......... ನಾವು ಆರು ಜನ ಮಕ್ಕಳು ಆವತ್ತು ಪಾರ್ಟಿ ಮಾಡಿದ್ವಿ.......... ಆವಾಗೆಲ್ಲಾ ಪಾರ್ಟಿ ಎಂದ್ರೆ ನೆಲ್ಲಿಕಾಯಿ, ಕೆಂಪು ದಾಸವಾಳ ಹಣ್ಣು, ಕೌಳಿ ಕಾಯಿ, ಮುಳ್ಳಹಣ್ಣು ಮುಂತಾದವುಗಳ ಗಿಡಕ್ಕೆ ಲಗ್ಗೆ ಇಡುವುದು.       ಎಲ್ಲಾ ಕೊಯ್ದು ಒಂದು ಕಡೆ ರಾಶಿ ಹಾಕಿ, ಆರು ಜನರು ಸಮನಾಗಿ ಹಂಚಿಕೊಂಡು ತಿನ್ನುವುದು.


                                                             ಎರಡು ದಿನ ಹೇಗೆ ಕಳೆಯಿತೋ ಗೊತ್ತೇ ಇಲ್ಲ. ಸೋಮವಾರ ಬಂದೇ ಬಿಟ್ಟಿತು. ಎಲ್ಲರ ಅಮ್ಮಂದಿರು, ಮಕ್ಕಳ ಬಟ್ಟೆಗೆಲ್ಲಾ ಇಸ್ತ್ರಿ ಹಾಕಿ ಮಕ್ಕಳ ಮೋರೆಗೆ ಪೌಡರು ಹಚ್ಚಿ, ಶಾಲೆಗೆ ಸಿದ್ದ ಮಾಡುತ್ತಿದ್ದರು. ನಾವೆಲ್ಲಾ, ಮದುವೆ ಮನೆಗೂ ಪೌಡರ್ ಹಚ್ಕೋಂಡು ಹೊಗ್ತಾ ಇಲ್ಲದೆ ಇರುವ ಕಾಲ ಅದು. ನಮಗೆ ಖುಷಿನೋ ಖುಷಿ. ಪೌಂಡ್ಸ್ ಪೌಡರು, ಎನ್ ಘಮ ಘಮ ಎನ್ನುತ್ತಾ ಇತ್ತು. ಎರಡು ಜಡೆ, ಹೊಸ ರಿಬ್ಬನ್, ಹೊಸ ಪ್ಯಾರಗಾನ್ ಚಪ್ಪಲ್ಲು, ಹೊಸ ಪಾಠಿ ಚೀಲ
ಎಲ್ಲಾ ತಗೊಂಡು ಶಾಲೆಗೆ ಹೊರಟ್ವಿ. ನಾನು ನನ್ನ ತಂಗಿ ಸವಿ, ಪಕ್ಕದ ಮನೆಯ ರೇಖಾ, ಮೇಲಿನ ಮನೆಯ ಪ್ರಸನ್ನ, ಗಣೇಶ, ಹಾಗೂ ಕಾಕಲ ಗದ್ದೆಯ ನಾಗರಾಜ ರಘುಪತಿ, ನಮ್ಮ ಮಕ್ಕಳ ಸೈನ್ಯ ಶಾಲೆಯ ಕಡೆಗೆ ಹೆಜ್ಜೆ ಹಾಕಿತು. ಮಾಸ್ತರು ಬರ್ತಾರೆ ಹೇಳಿ ಶಾಲೆ ಸಾರಿಸಿ, ಚೆನ್ನಾಗಿ ರಂಗೋಲಿ ಹಾಕಿ ಸಿಂಗರಿಸಿದ್ವಿ.
   
                                                            ಬಸ್ಸು ಬಂತು. ಮಾಸ್ತರು ಇಳಿದ್ರು, ನಾವೆಲ್ಲಾ ಬಸ್ಸಿನ ಹತ್ತಿರ ಓಡಿ ಹೋಗಿ, "ಮಾಸ್ತರೇ ಅಂದಿ, ಮಾಸ್ತರೇ ಅಂದಿ, .............ಮಾಸ್ತರೇ ಅಂದಿ, ....." ಅಂತಾ ಕಿರುಚಲು ಶುರು ಮಾಡಿದ್ವಿ. ಮನೇಲಿ ಯಾರೇ ಬಂದರೂ ಮಾತನಾಡಿಸಬೇಕೆಂದು ಹೇಳಿಕೊಟ್ಟಿದ್ದರು.....!!!!!!!!!!

                                                            ಮಾಸ್ತರಿಗೆ ಕೋಪ ಮೂಗಿನ ತುದಿಯಲ್ಲಿ ಇತ್ತು ಅನಿಸುತ್ತೆ, ( ಹಳ್ಳಿಗೆ ವರ್ಗಾವಣೆ ಮಾಡಿದ್ದಕ್ಕಿರಬೇಕು, ಇಲ್ಲಾ ಮನೆಯಲ್ಲಿ ಹೆಂಡತಿ ಜಗಳ ಆಡಿರಬೇಕು)............. ಬಸ್ ಇಳಿದವರೇ, ಚೀಲದಿಂದ ಬೆತ್ತ ತೆಗೆದು "ಮುಚ್ಚಿ ಬಾಯಿ" ಎಂದು ಗದರಿದರು. "ಏನಿದು ಫಿಶ್ ಮಾರ್ಕೆಟ್ಟಾ??? ಕಿರುಚೊದಕ್ಕೆಎಂದರು... ನಾವು ಹಳ್ಳಿ ಮಕ್ಕಳಿಗೆ ಪಿಶ್ ಮಾರ್ಕೆಟ್ ಎಂದರೆ ಎನೂ ಅಂತನೂ ಗೊತ್ತಿಲ್ಲ. ಆದ್ರೂ ಬಾಯಿ ಮುಚ್ಕ೦ಡು ಶಾಲೆ ಕೊಠಡಿಯೊಳಗೆ ಬಂದ್ವಿ...

                                                           ಮಾಸ್ತರು ಹಾಜರಿ ಹಾಕಿ, ಎಲ್ಲರಿಗೂ "........ ದಿಂದ .... ಜ್ಞಂ...... ಜ್ಞ್ಹ" ವರೆಗೂ ಬರೆಯಿರಿ ಪಾಟಿ ಮೇಲೆ" ಎಂದು ಹೇಳಿ ಮೇಜಿನ ಮೇಲೆ ತಲೆ ಇಟ್ಟು  ಮಲಗಿದರು ........zzzzzzzZZZZZzzzzz


                                                            ನಾನು, ಪ್ರಸನ್ನ ಎರಡನೆ ತರಗತಿಯವರಾದ್ದರಿಂದ ನಮಗೆ ಬರೆಯಲು ಬರುತ್ತಿತ್ತು. ಇಬ್ಬರೂ ಬರೆಯಲು ಶುರು ಮಾಡಿದೆವು. ಉಳಿದವರು ನಮ್ಮನ್ನು ನೋಡಿ ಬರೆಯತೊಡಗಿದರು. ಆದರಿ ಸವಿ ಮಾತ್ರ ನೋಡಿ ಬರೆಯಲಿಲ್ಲ. ಅವಳಿಗೆ ದಿಂದ ಅಂ ಅಃ ತನಕ ಮಾತ್ರ ಬರುತಿತ್ತು. ಅಷ್ಟನ್ನೆ ಬರೆದು ಮಾಸ್ತರಿಗೆ ತೋರಿಸಿದಳು. "ನಂಗೆ ಬರುದು ಇಷ್ಟೆ, ಮುಂದೆ ಬರುದಿಲ್ಲ....ಹೇಕೊಡಿ ಬರಿತೇನೆ..." ಎಂದಳು...... ಮಾಸ್ತರು ನಿದ್ದೆಗಣ್ಣಲ್ಲೇ "ಬೆತ್ತ ತಗೋತೆನೆ ಬರಿದೆ ಇದ್ರೆ" ಅಂದು ಮಲಗಿದರು.

                                                          ಇವಳಿಗೆ ಮೂಗಿನ ತುದಿಯಲ್ಲಿ ಕೋಪ, ಪಾಠಿಚೀಲ ತಗಂಡು, ಶಾಲೆಗೆ ಹೊರಗಿನಿಂದ ಚಿಲಕ ಹಾಕಿ ಮನೆ ಕಡೆ ಹೊರಟಳು. ನಾವೆಲ್ಲಾ ಶಾಲೆ ಒಳಗೆ ಸಿಕ್ಕಿಹಾಕಿಕೊಂಡ್ವಿ.... ದೂರದಲ್ಲಿ ಹೊಗ್ತಾ ಇರೋಳನ್ನ ಕೂಗಿ..." ಮಾಸ್ತರು ಕಿಟಕಿಯಲ್ಲಿ ಹೊರಗೆ ಹೋದ್ರು, ನಂಗ ಮಾತ್ರ  ಶಾಲೆಲ್ಲಿ ಇದ್ಯ.....ಬಾಗಿಲು ತೆಗಿ ಬಾ....." ಎಂದು ಕೂಗಿದೆವುಆಗ ಅವಳು, "ನಿಂಗವು ಕಿಡಕಿಯಿಂದನೇ ಹೊರಗೆ ಬನ್ನಿ, ನಾ ಎಂತಕ್ಕೆ ವಾಪಸ್ ಬರ್ಲಿ.....?" ಎಂದು ಹೇಳಿ ಹೊರಟೇ ಹೋದ್ಲು...

                                                          ಚಿಕ್ಕ ಹಳ್ಳಿ ಆದ್ದರಿಂದ, ಜನಸಂಖ್ಯೆಯೂ ಕಡಿಮೆ, ಯಾರದರೂ ದಾರಿಯಲ್ಲಿ ಬರುತ್ತಾರೋ ಎಂದು ಕಾಯುವುದೇ ನಮ್ಮ ಕೆಲಸ. ಮಾಸ್ತರಿಗೇಂತು ನಿದ್ರಾದೇವಿ ಓಡಿಹೋಗಿದ್ದಳು.  ಅವರೂ ಕಿಡಕಿಯಲ್ಲಿ ಹೊರಗೆ ಇಣುಕಿ ನೋಡುತ್ತಿದ್ದರು. ಅಂತು ಇಂತು ಹೂವಿನ ಮನೆಯ, ಕೆಲಸದಾಳು ಆ ದಾರಿಯಲ್ಲಿ ಬಂದ, ದೇವರೇ ಬಂದಹಾಗಾಯ್ತು. ಅವನು ಬಂದು ಬಾಗಿಲು ತೆಗೆದು ನಮ್ಮನ್ನು, ಮಾಸ್ತರನ್ನು ಮುಕ್ತಗೊಳಿಸಿದ.

                                             ಅವತ್ತೆ ಕೊನೆ, ಮರುದಿನದಿಂದ ಮಾಸ್ತರು ಬೆತ್ತ ತರೋದನ್ನೆ ಬಿಟ್ಟುಬಿಟ್ಟರು. ಬಯ್ಯುವುದನ್ನೂ ಬಿಟ್ಟರು. ಆರೇ ತಿಂಗಳಿಗೆ ಶಾಲೆಯನ್ನು ಬಿಟ್ಟು, ಬೇರೆ ಊರಿಗೆ ವರ್ಗವಾಗಿ ಹೋದರು………!!!!!!!

ಮತ್ತೆ ಹೊಸ ಮಾಸ್ತರ ನಿರೀಕ್ಷೆಯಲ್ಲಿ ಮಕ್ಕಳು ಮತ್ತು ಊರವರು…..

-ಸಶೇಷ

12 comments:

 1. Hehe Khare Howda, sathya ghatane aadhaarita rochaka kathena idu!!? :)

  ReplyDelete
  Replies
  1. samu bahala sundaravaagi banju .namma timenalli naditaa iddaddanna munde tndu nilsdangaatu . thax haleya ghatanegalannu nenapu maadkambange maadiddakke.

   Delete
 2. ಸಮನ್ವಯಾ....

  ಬಹಳ ಸೊಗಸಾದ ನಿರೂಪಣೆ..
  ನನ್ನ ಕನ್ನದ ಶಾಲೆಯ ಘಟನೆಗಳು ನೆನಪಾಯಿತು...

  ಮೊದಲ ಬರಹದಲ್ಲೇ ಸಿಕ್ಸರ್ !!

  ಮುಂದುವರೆಯಲಿ ಜೈ ಹೋ !!

  ReplyDelete
  Replies
  1. ಥಾಂಕ್ಸ್ ಪ್ರಕಾಶಣ್ಣ....

   Delete
 3. ಚಂದ ಇದ್ದು :-)
  ಸವಿ ಕಾಪಿ ಮಾಡದಿಲ್ಲೆ ಹೇಳದ್ರಲ್ಲಿನ ಮಕ್ಕಳ ಮುಗ್ದತೆ, ಪೌಡ್ರು, ಪಾರ್ಟಿ ಪ್ರಸಂಗ ಎಲ್ಲಾ ಮಸ್ತಿದ್ದು :-)

  ಮಸ್ತ್ ಬ್ಲಾಗ್, ಮುಂದುವರ್ಸಿ :-)

  ReplyDelete
 4. ಎಯ್ ರಾಶಿ ಛೊಲೋ ಇದ್ದು...ನಂಗೂ ಪ್ರಕಾಶಣ್ಣ ಹೇಳ್ದಂಗೆ ನನ್ನ ಕನ್ನಡ ಶಾಲೆ ನೆನ್ಪಾತು,..ಮುಂದುವರಿಲಿ...
  ಇಷ್ಟ ಆತು....

  ReplyDelete
 5. ಮಸ್ತ್ ಇದ್ದು :) ಬಾಗಿಲು ಹಾಕ್ಯಂಡ್ ಹೋಗಿದ್ದಂತೂ ಸೂಪರ್!

  ReplyDelete