ಅಘನಾಶಿನಿ ನಮ್ಮ ಮನೆಯ ಬಳಿ ಹರಿಯುವ ನದಿ ........ ನದಿಯ ಹೆಸರೇ ಇಷ್ಟು ಚೆನ್ನಾಗಿರುವಾಗ ನದಿ ಹೇಗಿರ ಬಹುದು? ಅಲ್ವಾ? ನಿಜವಾಗಲು ತುಂಬಾ ನೆನಪಿಸಿಕೊಳ್ತೀನಿ ಕಣೆ.. ಅದಕ್ಕೆ ನಿನ್ನ ಹೆಸ್ರ್ನೆ ಇಟ್ಟಿದಿನಿ ....
Saturday, 27 October 2012
Saturday, 8 September 2012
ಉಸಿರು....
ನಿನ್ನ ಉಸಿರಲೇ ನನ್ನ ಹೆಸರಿದೆ
ಎಂದನು ಅಂದು .....
ನಿನ್ನ ಮನಸಲೆ ನನ್ನ ಮನಸಿದೆ
ಎಂದಳು ಅಂದು ....
ಉಸಿರು ಹಾರಿಹೋಯಿತು
ಮನಸ್ಸು ಕಾಣದಾಯಿತು .....
ಎಂದನು ಅಂದು .....
ನಿನ್ನ ಮನಸಲೆ ನನ್ನ ಮನಸಿದೆ
ಎಂದಳು ಅಂದು ....
ಉಸಿರು ಹಾರಿಹೋಯಿತು
ಮನಸ್ಸು ಕಾಣದಾಯಿತು .....
ಹಣೆಬರಹ
ಸಾವಿರಾರು ಕನಸ್ಸಿತ್ತು ಕಣ್ಣಿನಲ್ಲಿ
ನೂರಾರು ಕಲ್ಪನೆಗಳಿತ್ತು ಮನದಲ್ಲಿ
ಕನಸ್ಸು ,ಕಲ್ಪನೆಗೂ ಮೀರಿದಾ
ಹಣೆಬರಹ ಎಂಬುದೊಂದಿತ್ತು
ಅದು ಕನಸ್ಸು ,ಕಲ್ಪನೆಗಳನ್ನು ತುಳಿದು
ಅಳುವೊಂದನ್ನೇ ಜೀವನದಲ್ಲಿ
ಬರೆದಿತ್ತು ...................
ನೂರಾರು ಕಲ್ಪನೆಗಳಿತ್ತು ಮನದಲ್ಲಿ
ಕನಸ್ಸು ,ಕಲ್ಪನೆಗೂ ಮೀರಿದಾ
ಹಣೆಬರಹ ಎಂಬುದೊಂದಿತ್ತು
ಅದು ಕನಸ್ಸು ,ಕಲ್ಪನೆಗಳನ್ನು ತುಳಿದು
ಅಳುವೊಂದನ್ನೇ ಜೀವನದಲ್ಲಿ
ಬರೆದಿತ್ತು ...................
Monday, 28 May 2012
ಮುಗ್ದತೆ ಮತ್ತು ಮೂರ್ಖತೆ .........
ಒಂದೂರಲ್ಲಿ ಒಬ್ಬ
ರೈತ ತನ್ನ ಕುಟುಂಬದ ಜೊತೆ ವಾಸವಾಗಿದ್ದ. ಅವನಿಗೆ ನಾಲ್ಕು ಜನ
ಮಕ್ಕಳು . ಮೂರು ಜನ ಹೆಣ್ಮಕ್ಳು , ಕೊನೆಯಲ್ಲಿ ಒಬ್ಬ
ಮಗ. ಹೊಲದಲ್ಲಿ ಬೆಳೆಯುವ
ಬೆಳೆಗೆ " ಬೆಲೆ " ಬಂದರೆ ಮಾತ್ರ,
ಅವನ ಸಂಸಾರ ಮೂರು ಹೊತ್ತು ಊಟ
ಮಾಡಬಹುದಿತ್ತು . ಒಟ್ಟಿನಲ್ಲಿ ಹೇಳಬೇಕೆಂದರೆ ಕಲಿಯುಗದ
" ಸುದಾಮ " ಎನ್ನಬಹುದು .
ಅವನಿಗೆ ತನ್ನ ಮಕ್ಕಳು
ಚೆನ್ನಾಗಿ ಓದಿ ಒಳ್ಳೆ ಹುದ್ದೆಯನ್ನು ಅಲಂಕರಿಸಬೇಕೆಂದು ಮಹಾದಾಸೆಯಿತ್ತು . ಹಿರಿಯ
ಮಗಳು "ಮೇಧಾ" , ಹೆಸರಿಗೆ
ತಕ್ಕಂತೆ ತುಂಬಾ ಜಾಣೆಯು , ತಾಳ್ಮೆ ಉಳ್ಳವಳು
ಆಗಿದ್ದಳು .ಅವಳು ಶಾಲೆಯಲ್ಲಿಯೂ
ಆದರ್ಶ ವಿದ್ಯಾರ್ಥಿನಿ ಆಗಿದ್ದಳು. ಅವಳು ಎಲ್ಲಾ
ಸ್ಪರ್ದೆಗಳಲ್ಲೂ ಮೊದಲ ಸ್ಥಾನಗಳಿಸುತ್ತಿದ್ದಳು .ಎಲ್ಲಾ ಶಿಕ್ಷಕರಿಗೂ
ಅಚ್ಚುಮೆಚ್ಚಾಗಿದ್ದಳು . ಅವಳು ಚೆನ್ನಾಗಿ ಓದುತ್ತಿದ್ದರಿಂದ ಅವಳ
ಓದಿನ ಖರ್ಚೆಲ್ಲ ಅವಳ
"ಸ್ಕೊಲರ್ಶಿಪ್ "ನಲ್ಲೇ ಪೂರೈಸುತ್ತಿದ್ದಳು
. ಅಪ್ಪನಿಗೆ ಮೇಧಾ ಎಂದರೆ ತುಂಬಾ ಹೆಮ್ಮೆ.
ಎರಡನೇ
ಮಗಳು "ಮಂಗಳ " , ತುಂಬಾ ಚೂಟಿ
. ದಿನಾಲೂ ತಾಯಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾ
, ಅಮ್ಮನ ಮುದ್ದಿನ ಮಗಳಾಗಿದ್ದಳು . ಮೂರನೆಯವಳು " ಮಂದಾರ
" ನಾಲ್ಕು ವರ್ಷದವಳು , ಇನ್ನು ಕೊನೆಯ
ಮಗ ಎಂಟು ತಿಂಗಳ
ಹಸುಗೂಸು .
ವರ್ಷಗಳು
ಕಳೆಯುತ್ತಿದ್ದ ಹಾಗೆ ಮಕ್ಕಳ
ಮನಸ್ಸು ಬದಲಾಗುತ್ತ ಹೋಯಿತು.
ದೊಡ್ಡ ಮಗಳು
ಕಾಲೇಜಿಗೆ ಹೋಗುತ್ತಿದ್ದಳು . ಮಕ್ಕಳಿಗೆ
ಬಡತನದ ಜೀವನ ಬೇಸತ್ತಿ
ಹೋಗಿತ್ತು... ತಮ್ಮ ವಾರಿಗೆಯ ಉಳಿದ ಮಕ್ಕಳನ್ನು
ನೋಡಿ ನಾವೂ ಹಾಗೆ ಇರಬೇಕೆಂದುಕೊಳ್ಳುತ್ತಿದ್ದರು .. ಆದರೆ ಬಡತನದ
ಪೆಡಂಭೂತ ಬೆಂಬಿಡದೆ ಕಾಡುತ್ತಿತ್ತು . ಎಲ್ಲ ತಂದೆ, ತಾಯಿಯರೂ
ತಮ್ಮ ಮಕ್ಕಳನ್ನು ಸಮಾನವಾಗಿ
ಪ್ರೀತಿಯಿಂದ ನೋಡಿಕೊಳ್ಳುತ್ತಾರೆ . ಸಮಾನವಾಗಿ
ವಾತ್ಸಲ್ಯ ತೋರಿಸುತ್ತಾರೆ . ಆದರೆ ಮಕ್ಕಳು
ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ !!!
ಮೇಧಾ
ದೊಡ್ದವಳಾದ್ದರಿಂದ ತಂದೆ , ತಾಯಿಯರು
ಅವಳ ಬಗ್ಗೆ ಗಮನ ಕಡಿಮೆ ಮಾಡಿದರು
. ಅವಳು ಎಲ್ಲವನ್ನು ಚೆನ್ನಾಗಿ
ನಿಭಾಯಿಸ ಬಲ್ಲಳು ಎಂಬ
ನಂಬಿಕೆಯಿಂದ .....
ಮೇಧಾ ತನ್ನ ಉನ್ನತ
ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದಳು .
ಅಲ್ಲಿ ಹಾಸ್ಟೆಲ್ ನಲ್ಲಿ
ಉಳಿಯ ಬೇಕಾಯಿತು . ಹೊಸ
ಗೆಳತಿಯರು , ಹೊಸಾ ವಾತಾವರಣ , ಹೊಸ ಊಟ ... ಎಲ್ಲದಕ್ಕೂ
ಹೊಂದಿಕೊಳ್ಳಲು ತಿಂಗಳವೆ .. ಆಗಿಹೋಯಿತು . ಮೇಧಾ
ತುಂಬಾ ಶಾಂತ ಸ್ವಭಾವದವಳಾಗಿದ್ದಳು , ಕ್ಲಾಸಿನಲ್ಲಿಯೂ
ಯಾರೊಂದಿಗೂ ಹೆಚ್ಚಾಗಿ
ಹರಟುತ್ತಿರಲಿಲ್ಲ . ಅವಳಿಗೆ ಯಾರೂ
ಆತ್ಮೀಯ ಗೆಳತಿಯರು ಇರಲಿಲ್ಲ.
ಮೇಧಾಳಿಗೆ ಒಂಟಿತನ
ಕಾಡುತ್ತಿತ್ತು . ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಯಾರೂ ಇಲ್ಲದ
ಪರಿಸ್ಥಿತಿ !!!! ಅಪ್ಪ , ಅಮ್ಮನಿಗೆ ಹೇಳಿಕೊಳ್ಳೋಣ ಎಂದರೆ ಅವರ
ಸಮಸ್ಯೆಯ ಮುಂದೆ ಮಗಳ
ಮಾತು ಕೇಳಲು ಪುರುಸೊತ್ತೇ ಇರುತ್ತಿರಲಿಲ್ಲ ......
ಒಂದು ದಿನ
ಮೇಧಾ ಕಾಲೇಜ್ ಎದುರಿನ
ಪಾರ್ಕಿನಲ್ಲಿ ಒಂಟಿಯಾಗಿ ಕುಳಿತು
ಏನೋ ಓದುತ್ತಿದ್ದಳು . ಆಗ
ಅವಳಿಗೆ "ಮೋಹನ್ " ನ
ಪರಿಚಯವಾಯಿತು . ಮೋಹನ್ ಒಳ್ಳೆಯ
ಹುಡುಗ . ಬುದ್ಧಿವಂತ ಕೂಡ
. ಇಬ್ಬರು ಸ್ನೇಹಿತರಾದರು . ಮೊದಮೊದಲು
ಅವಳು ಹೆಚ್ಚೇನು ಮಾತನಾಡುತ್ತಿರಲಿಲ್ಲ . ಆದರೆ ಮೋಹನ್
ಒಳ್ಳೆಯ ಮಾತುಗಾರ . ಮಾತನಾಡದವರನ್ನು ಮಾತಾಡುವಂತೆ ಮಾಡುತ್ತಿದ್ದ !!
ಮೋಹನ್ ಮೇಧಾಳಿಗೆ
ಒಳ್ಳೆಯ ಸ್ನೇಹಿತನಾದ . ಇಬ್ಬರೂ
ದಿನಾಲೂ ಸೆಂಜೆಯೆಲ್ಲ ಮಾತನಾಡಿಯೇ
ತಮ್ಮ ತಮ್ಮ ಹಾಸ್ಟೆಲ್
ಗೆ ಮರಳುತ್ತಿದ್ದರು . ಮೇಧಾ
ನಿಧಾನವಾಗಿ ಮೋಹನ್ ನ
ಮೇಲೆ ಅವಲಂಬಿತಳಾಗತೊಡಗಿದಳು. ತನ್ನ ಎಲ್ಲಾ ದುಖಃ , ಸಂತೋಷಗಳನ್ನೂ ಅವನ
ಬಳಿ ಹೇಳಿಕೊಳ್ಳಲಾರಂಬಿಸಿದಳು. ಅವನೂ
ಇವಳ ಮನಸ್ಸಿನ ಭಾವನೆಗಳಿಗೆ
ಸ್ಪಂದಿಸುತ್ತಿದ್ದ.
ಅವರ ಸ್ನೇಹ
ಹೆಚ್ಚು ದಿನ ಸ್ನೇಹವಾಗಿ ಉಳಿಯಲಿಲ್ಲ.!!!
ಅವನು
ಅವಳನ್ನು ಪ್ರೇಮಿಸುವುದಾಗಿ ಹೇಳಿದ. ಅವಳ ಆನಂದಕ್ಕೆ ಪಾರವೇ
ಇರಲಿಲ್ಲ ... ಅವಳ
ಮನಸ್ಸು ಇಷ್ಟು ದಿನ ನಿಂತ ನೀರಾಗಿತ್ತು.. ಈಗ ಸಮುದ್ರವನ್ನು
ಸೇರಲು ಓಡುತ್ತಿರುವ ನದಿಯಂತಾಯಿತು. ಅವಳಿಗೆ ಹೊಸ ಜಗತ್ತೊಂದು ಬಾಗಿಲು ತೆರೆದು ಬಾ ಎಂದು ಕೈ ಚಾಚಿ ಕರೆಯುತ್ತಿರುವಂತೆ ಭಾಸವಾಯಿತು.. ಮೆಧಾ ತನ್ನ ಹಳೆಯ ಜೀವನವನ್ನು (ತಂದೆ,ತಾಯಿಯನ್ನು) ಮರೆತೇ ಬಿಟ್ಟಳು.. ಮೊಹನ್ ನ ಪ್ರೀತಿಯ ಕಡಲಲ್ಲಿ ಈಜುವ ಮೀನಾದಳು.
ಮೊಹನ್ ಕೂಡ
ಮೆಧಾಳನ್ನು ಯತೇಛ್ಛವಾಗಿ ಪ್ರೀತಿಸುತ್ತಿದ್ದ.
ಅವಳ ಜೊತೆ ಮಾತನಾಡದೇ ಒಂದು ದಿನವೂ ಇರುತ್ತಿರಲಿಲ್ಲ. ಅವಳನ್ನು ನಗಿಸುತ್ತ ತಾನೂ ನಗುತ್ತ ಪ್ರೀತಿಯ ಮಾಯೆಯಲ್ಲಿ
ಸಿಲುಕಿದ್ದನು. ಅವನು ಅವಳಿಗೋಸ್ಕರ ಎನನ್ನು ಕೂಡ ಮಾಡಲು ತಯಾರಿದ್ದನು.
ಒಂದು ದಿನ
ಮೊಹನ್ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು ಕಾಲು ಪೆಟ್ಟುಮಾಡಿಕೊಂಡನು!!.. ಈ ವಿಷಯವನ್ನು ಕೇಳಿದ ಮೆಧಾ
ಅಳುತ್ತಾ ಮೊಹನ್ ಗೆ ಪೋನ್ ಮಾಡಿದಳು. ಅವನ ಧ್ವನಿ ಇವಳಿಗೆ ಸಾಂತ್ವನ ನೀಡಿತ್ತು. ಅವಳು ಅವನ ಯೋಗಕ್ಷೇಮ ವಿಚಾರಿಸಿದಳು. ಅವನಿಗೆ ಹೆಚ್ಚೇನು ಪೆಟ್ಟಾಗದ ಕಾರಣ ಅವನನ್ನು ನೋಡಲು ಹೊಗಲಿಲ್ಲ.
ಮಾರನೆ ದಿನ
ಮೊಹನ್ ಮೆಧಾಳಿಗೆ ಪೋನ್ ಮಾಡಿದ್ದ.
ಇವಳು
ಖುಷಿಯಿಂದ ಮಾತಡಿದಳು.. ಆದರೆ ಮೊಹನ್ ನ ಯೋಚನೆಯೆ ಬೇರೆಯಾಗಿತ್ತು.
ಅವನು
ಎಂದಿನಂತೆ ಇರಲಿಲ್ಲ...ಜಗಳವಾಡಲು ಪೋನ್ ಮಾಡಿದಂತಿತ್ತು.. ಇವಳು ಅದನ್ನು ನಿರೀಕ್ಷಿಸಿರಲಿಲ್ಲ.
ಮೆಧಾ ,ಮೊಹನ್ ನನ್ನು ನೋಡಲು
ಹೊಗಲಿಲ್ಲ ಎಂಬ ಕಾರಣಕ್ಕೆ
ಇಬ್ಬರ
ನಡುವೆ ಜಗಳ ನದೆದಿತ್ತು...ಮೊಹನ್ ಕೇಳಿದ
” ನನಗೋಸ್ಕರ ಹೊಸ್ಟೆಲ್ ಗೆ ಬರದವಳು ನನ್ನ
ಪ್ರೀತಿ
ಮಾಡುವುದು ನಿಜವಾ??” ಮೆಧಾ ಇದ್ಯಾವುದನ್ನು ತಿಳಿಯದ ಮುಗ್ದೆಯಂತೆ ಅವನ
ಮಾತುಗಳನ್ನು ಕೇಳುತ್ತ ಅಳುತ್ತಿದ್ದಳು...
“ಹೇಳು ನಾನೇನು ಮಾಡಬೇಕು” ಎಂದು ಕೇಳಿದಳು ಮೆಧಾ..
ಅವನು
ಸಿಟ್ಟಿನ ರಭಸದಲ್ಲಿ “ ಹೊಸ್ಟೆಲ್ ಮಹಡಿಯಿಂದ ಕೆಳಕ್ಕೆ ಹಾರು.. ನಂಬ್ತೀನಿ ನಿನ್ನ”..... ಎಂದ.
ಪಾಪ
ಅವಳು ಏನನ್ನೂ ಯೋಚಿಸದೆ ಕೆಳಕ್ಕೆ ಹಾರಿದಳು.....
ಪ್ರೀತಿಯ ಅಲೆಯಲ್ಲಿ
ತೇಲುತ್ತಿದ್ದ ದೋಣಿ ಮುಳುಗಿತ್ತು!!! ಮೆಧಾಳ
ಪ್ರಾಣಪಕ್ಷಿ ಹಾರಿಹೋಗಿತ್ತು......
ಸ್ನೇಹಿತರೆ
ಇದನ್ನು ಮೆಧಾಳ “ ಮುಗ್ದತೆ “ ಎನ್ನಬೇಕೋ??? ಅಥವಾ ಮೂರ್ಖತನವೆನ್ನಬೇಕೋ??? ನಿಮ್ಮ ಅಭಿಪ್ರಾಯ ತಿಳಿಸಿ...........
Friday, 25 May 2012
Sunday, 4 March 2012
Thursday, 29 December 2011
Sunday, 25 December 2011
Saturday, 24 December 2011
ಅಮ್ಮಾ.....
" ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? ಅದು ನೀಡುವ ಶಾಂತಿ, ಕಾಂತಿ ಯಾವ ತಾರೆ, ರವಿಗಿದೆ ??"
ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಮಗುವಿನ ಮೊದಲ ನುಡಿ "ಅಮ್ಮಾ...". ತಾಯಿ ಪ್ರಕೃತಿಯ ಅಪೂರ್ವವಾದ ವರ. ಆ ಅಮ್ಮ ಶಬ್ಧದಲ್ಲಿ ಎಷ್ಟು ವಾತ್ಸಲ್ಯ , ಪ್ರೀತಿ,ಆತ್ಮೀಯತೆ ತುಂಬಿರುತ್ತದೆ ಅಲ್ವಾ?
ಸಂಸ್ಕೃತದಲ್ಲಿ " ಮಾತೃದೇವೋಭವ " ಎಂದು ತಾಯಿಗೇ ಅಗ್ರಸ್ಥ್ಹಾನ ನೀಡಿದ್ದಾರೆ. ತಾಯಿಯ ಗರ್ಭದಲ್ಲಿ ಮಗು ಅಂಕುರಿಸಿದಾಗಲೇ ಮಗುವಿನ ಮತ್ತು ತಾಯಿಯ ವಿಶಿಷ್ಟ ಭಾಂದವ್ಯ ಬೆಸೆಯತೊಡಗುತ್ತದೆ .
" ತಾಯೇ ನಿನ್ನ ಮಡಿಲಲಿ ಕಣ್ಣು ತೆರೆದ ಕ್ಷಣದಲಿ ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ "
ಮನುಷ್ಯ ತನ್ನ ಬಾಲ್ಯದಿಂದ ಮುಪ್ಪಿನವರೆಗೂ ತಾಯಿಯನ್ನು ಅವಲಂಬಿಸಿರುತ್ತಾನೆ. ಪ್ರತೀ ನೋವಿಗೂ ಮನುಷ್ಯನ ಮೊದಲ ಸ್ಪಂದನ "ಅಮ್ಮಾ.... ". ಮನುಷ್ಯ ಎಷ್ಟೇ ದೊಡ್ಡವನಾದರೂ ತಾಯಿಗೇ ಮಗುವೇ. ತಾಯಿಯ ಮಡಿಲಲ್ಲಿ ಸಿಗುವ ನೆಮ್ಮದಿ , ನಿರಾತಂಕ ಎಲ್ಲಿ ಸಿಗಬಹುದು? ತ್ಯಾಗ ,ಮಮತೆ ,ಪ್ರೀತಿ,ವಾತ್ಸಲ್ಯಗಳ ಸಂಗಮ ಆಕೆ. "ಕ್ಷಮಯಾ ಧರಿತ್ರಿ " ಸಂಸಾರಕ್ಕಾಗಿ ತನ್ನ ಸುಖ ಸಂತೋಷಗಳನ್ನೆಲ್ಲ ತ್ಯಾಗ ಮಾಡುತ್ತಾಳೆ . ಅಂತಹ ಮಹತ್ತರ ಪಾತ್ರ ತಾಯಿಯದ್ದು . ಆಕೆಯ ವ್ಯಕ್ತಿತ್ವ ಮೇರು ಪರ್ವತದಂತೆ . ಸಂಸ್ಕೃತದ ಮಾತಿನಂತೆ " ಕುಪುತ್ರೋ ಜಾಯೇತ್ ಕ್ವಚಿದಪಿ ಕು ಮಾತಾ ನ ಭವತಿ " ಕೆಟ್ಟ ಮಕ್ಕಳನ್ನು ಕಾಣಬಹುದು , ಆದರೆ ಕೆಟ್ಟ ತಾಯಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ .
ಇಂಗ್ಲೀಷ್ ನಲ್ಲಿ ಒಂದು ಮಾತಿದೆ " god could not be everywhere , therefore he created 'mothers'..". ತಾಯಿ ಪ್ರತ್ಯಕ್ಷ ದೈವ. ಮಗುವಿನ ಒಂದು ನಗುವಿನಿಂದ ತನ್ನೆಲ್ಲ ನೋವನ್ನು ಮರೆಯುತ್ತಾಳೆ .ಆ ಮಗುವಿಗಾಗಿ ತನ್ನೆಲ್ಲ ಬದುಕನ್ನು ಮುಡಿಪಾಗಿಡುತ್ತಾಳೆ.
" ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧು ಇಲ್ಲ " ಎಂದು ನಮ್ಮ ಗಾದೆಕಾರರು ಹೇಳಿದ್ದಾರೆ.
" ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು ".
ಹೀಗೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಶಿಲ್ಪಿಯನ್ನಾಗಿ ಆಕೆಯನ್ನು ನಿರೂಪಿಸಿದ್ದಾರೆ. ಮಕ್ಕಳಿಗೆ ಮಮತೆಯ ಅಮ್ಮನಾಗುವ, ಗುರುವಾಗುವ ,ಸ್ನೇಹಿತೆಯಾಗುವ ,ಮಾರ್ಗದರ್ಶಿಯಾಗುವ ಆಕೆಯ
ಹೃದಯ ವೈಶಾಲ್ಯತೆಯನ್ನು ಎಷ್ಟು ಹೇಳಿದರೂ ಕಡಿಮೆಯೇ ..
ಗಂಧದ ಕೊರಡಿನಂತೆ ತನ್ನನ್ನು ತಾನು ತೇಯ್ದು ಪರಿಮಳ ಮಧುರತೆಯನ್ನು ಹರಡಿಸುವ ಅವಳ ಬದುಕಿಗೆ ನಾವು ಏನು ಹೋಲಿಸಿದರೂ ಕಡಿಮೆಯೇ . ಎಷ್ಟು ಹೇಳಿದರೂ ಸ್ವಲ್ಪವೇ .ಅವಳು ಅಳೆಯಲಾಗದ ಪ್ರೀತಿಯ ಸಮುದ್ರ . ವಾತ್ಸಲ್ಯದ ಸೋನೆಮಳೆ , ಮುಗಿಯದ ಮಮತೆಯ ಜಲಪಾತ . ಅವಳನ್ನು ವರ್ಣಿಸಲು ಪದಗಳೇ ಇಲ್ಲ.!!..
ಫ್ರೆಂಡ್ .......
ನೀನೇನು ಕೇಳಿಲ್ಲ , ನಾನೇನು ಹೇಳಿಲ್ಲ
ನಿನಗೆ ಎಲ್ಲವೂ ಅರ್ಥವಾಯಿತಲ್ಲ
ನನ್ನ ಮಾತನ್ನು ಕೆಳುವವರಿರಲಿಲ್ಲ
ನೀನು ಕಿವಿಗೊಟ್ಟು ಆಲಿಸಿದೆಯಲ್ಲ ..
ನೋವಾದಾಗ ಯಾರಿಗೂ ಹೇಳಲಿಲ್ಲ
ಆದರೆ ನೀನು ಅರಿತುಕೊಂಡೆಯಲ್ಲ..
ಕಣ್ಣಂಚಿನ ಹನಿ ಮುಚ್ಚಿಟ್ಟುಕೊಂಡೆನಲ್ಲ
ಅದ ನೀ ಮಾತ್ರ ಕಂಡುಕೊಂಡೆಯಲ್ಲ
ನಿನ್ನ ಕಣ್ಣು ನನಗಾಗಿ ಹೊಳೆದವು
ಹೃದಯಗಳು ಹೆಮ್ಮೆಯಿಂದ ಬೀಗಿದವು
ಅಳುವಿನ ಕಡಲಿಗೆ ನಗುವಿನ ಸಿಡಿಲಾದವು
ಒಳಗಿನ ನೋವಿಗೆ ಮಗುವಿನ ಮಡಿಲಾದವು
ನನ್ನ ಬಗ್ಗೆ ನಿನಗೆಲ್ಲವೂ ಗೊತ್ತಿದೆ
ನನ್ನ ನೋವುಗಳೂ ಗೊತ್ತಿದೆ
ನನ್ನ ನಲಿವುಗಳೂ ಗೊತ್ತಿವೆ
ನನ್ನ ಅಪಮಾನಗಳೂ ಗೊತ್ತಿವೆ
ನನ್ನ ಸನ್ಮಾನಗಳೂ ಗೊತ್ತಿವೆ
ನೀನು ನನ್ನಲ್ಲೇನು ಕೇಳಿಲ್ಲ
ನಾನು ಮುಚ್ಚಿಟ್ಟದ್ದೂ ಇಲ್ಲ
ಜಗತ್ತಿನ ಬಗ್ಗೆ ನಂಬಿಕೆ ಹುಟ್ಟಿಸಿದೆ
ನನ್ನೊಳಗೆ ಆತ್ಮ ವಿಶ್ವಾಸ ಹುಟ್ಟಿಸಿದೆ
ಮತ್ತು ಈ ಜಗತ್ತಿನಲ್ಲಿ ನಿಜವಾದ
ಗೆಳೆತನ ಬದುಕಿದೆ ಎಂದು ತೋರಿಸಿದೆ
ಸ್ನೇಹ ಎಂದರೆ ನನ್ನ ನಿನ್ನ ನಡುವಿನ ಸೇತುವೆ
ನಿನಗೆ ಬೇಸರ ಅನಿಸಿದರೆ
ಏಕಾಂಗಿ ಅನಿಸಿದರೆ
ಅದನ್ನು ದಾಟಿ ಬಾ
ಇನ್ನೊಂದು ದಡದಲ್ಲಿ ನಾನು ಕಾಯುತ್ತಿರುವೆ
ಸ್ನೇಹವೆಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಂಡಿದೆ
ಆದರೆ ನನಗೆ ಕಂಡಿದ್ದು ನೀನಾಗಿ,ನೀನೆ ಆಗಿ ...
ಅದ್ಯಾಕೆ ಗೊತ್ತಾ??
ಅಂಥಹ ಸ್ನೇಹಕ್ಕೆ ನಾನು ಕಾದಿದ್ದೆ
ಅದೆಷ್ಟೋ ವರ್ಷಾಂತರ...
ಬಂದ ಗೆಳೆತನಕ್ಕೂ ನಾ
ಬಯಸಿದ್ದಕ್ಕು ಇತ್ತು ಅಂತರ ..
ನ ಬಯಸಿದ್ದು ನಿನ್ನಲ್ಲಿತ್ತು ಒಪ್ಪಿಕೊಂಡೆ ..
ಇದು ನಿರಂತರ
ಗೆಳೆತನವೆಂದರೆ ಹೃದಯದ ಮಿಡಿತ
ಅಂತಾ ಎಲ್ಲೋ ಕೇಳಿದ್ದೆ .
ನಿನ್ನ ಸಾನಿಧ್ಯದಲ್ಲಿ ಅದನ್ನು ಅನುಭವಿಸಿದೆ
ಏಕೆಂದರೆ ನಾನು ನೊಂದಾಗ
ನೀನು ಮರುಗುತ್ತಿದ್ದೆ
ನನಗೆ ನೋವಾದಾಗ
ನೀ ಕೊರಗುತ್ತಿದ್ದೆ..
ಸ್ನೇಹವೆಂದರೆ ಬರಿ ಸಂಭ್ರಮವಲ್ಲ
ನನ್ನ ಹನಿ ಕಣ್ಣೀರು ಕೂಡ ನಿನ್ನ ಕಣ್ಣ
ಬೆಳಕು ಬಿದ್ದಾಗ ಕಾಮನಬಿಲ್ಲಾಗಬೇಕು
ನನ್ನದೆಯ ಬಿರುಗಾಳಿಯಾ ಆರ್ಭಟ
ತಡೆವ ಗೋಡೆಯಾಗಬೇಕು .
ನನ್ನ ಆರ್ಥನಾದವನ್ನು ನೀನು
ಮಧುರ ಜೆಂಕಾರವಗಿಸಬೇಕು
ಎಂದು ಬಯಸಿದ್ದೆ ನಾನು
ನಿಜವಾಗಿ ಮೂಡಿಬಂದೆ ನೀನು
ಸಂತೋಷಕ್ಕೆ ಸಾವಿರ ಸ್ನೇಹಿತರಿರುತ್ತಾರೆ
ಸಂಕಟಕ್ಕೆ ಬರುವವರು ಯಾರಿರುತ್ತಾರೆ?
ಅಂತ ಯೋಚಿಸುತ್ತಿದ್ದೆ ನಾನು
ನೋವಿನಿಂದ ಕರುಳು ಚೀರಿದಾಗ
ಹೇಳದೆ ಪಕ್ಕದಲ್ಲಿದ್ದೆಯಲ್ಲ ನೀನು
ನಿಜವೆಂದರೆ ನನೋಬ್ಳು ಶುದ್ಧ ದಡ್ಡಿ ...
ಸ್ನೇಹವ ಬಯಸಿದಷ್ಟು ತೀವ್ರವಾಗಿ
ಮರಳಿಸುವುದರಲ್ಲಿ ಬರೀ ದಂಡ
ನನಗೇ ಕೆಲವೊಮ್ಮೆ ನೋವಾಗುತ್ತದೆ
ನಿನ್ನ ನೋಯಿಸಿದೆನಲ್ಲಾ ಎಂದು
ಆದರೆ ನಿನ್ಯಾವತ್ತೂ ಪ್ರಶ್ನಿಸಲಿಲ್ಲ
ಹಾಗೇಕೆ ಎಂದು ಕೇಳಲಿಲ್ಲ
ಅರ್ಥಾ ಮಾಡ್ಕೋ ಅನ್ನಲಿಲ್ಲ
ನೋವು ಮಾಡಿದರು ಮರುಗಲಿಲ್ಲ
ಯಾಕೆಂದರೆ ನನ್ನೊಳಗೆ ನಿನ್ನ "ಸ್ನೇಹಿತೆ " ಇದ್ದಳಲ್ಲ
ನೀನು ಬದಲಾಗು ಎನ್ನಲಿಲ್ಲ
ಅವರಂತಾಗು, ಇವರಂತಾಗು ಎನ್ನಲಿಲ್ಲ
ನೀನು ನೀನಾಗು ಎಂದೆ.........
ಕೊನೆಯದಾಗಿ ಹೇಳೋದಿಷ್ಟೇ
ಥಾಂಕ್ಯೂ .....my dear friend.....
ನಿನಗೆ ಎಲ್ಲವೂ ಅರ್ಥವಾಯಿತಲ್ಲ
ನನ್ನ ಮಾತನ್ನು ಕೆಳುವವರಿರಲಿಲ್ಲ
ನೀನು ಕಿವಿಗೊಟ್ಟು ಆಲಿಸಿದೆಯಲ್ಲ ..
ನೋವಾದಾಗ ಯಾರಿಗೂ ಹೇಳಲಿಲ್ಲ
ಆದರೆ ನೀನು ಅರಿತುಕೊಂಡೆಯಲ್ಲ..
ಕಣ್ಣಂಚಿನ ಹನಿ ಮುಚ್ಚಿಟ್ಟುಕೊಂಡೆನಲ್ಲ
ಅದ ನೀ ಮಾತ್ರ ಕಂಡುಕೊಂಡೆಯಲ್ಲ
ನಿನ್ನ ಕಣ್ಣು ನನಗಾಗಿ ಹೊಳೆದವು
ಹೃದಯಗಳು ಹೆಮ್ಮೆಯಿಂದ ಬೀಗಿದವು
ಅಳುವಿನ ಕಡಲಿಗೆ ನಗುವಿನ ಸಿಡಿಲಾದವು
ಒಳಗಿನ ನೋವಿಗೆ ಮಗುವಿನ ಮಡಿಲಾದವು
ನನ್ನ ಬಗ್ಗೆ ನಿನಗೆಲ್ಲವೂ ಗೊತ್ತಿದೆ
ನನ್ನ ನೋವುಗಳೂ ಗೊತ್ತಿದೆ
ನನ್ನ ನಲಿವುಗಳೂ ಗೊತ್ತಿವೆ
ನನ್ನ ಅಪಮಾನಗಳೂ ಗೊತ್ತಿವೆ
ನನ್ನ ಸನ್ಮಾನಗಳೂ ಗೊತ್ತಿವೆ
ನೀನು ನನ್ನಲ್ಲೇನು ಕೇಳಿಲ್ಲ
ನಾನು ಮುಚ್ಚಿಟ್ಟದ್ದೂ ಇಲ್ಲ
ಜಗತ್ತಿನ ಬಗ್ಗೆ ನಂಬಿಕೆ ಹುಟ್ಟಿಸಿದೆ
ನನ್ನೊಳಗೆ ಆತ್ಮ ವಿಶ್ವಾಸ ಹುಟ್ಟಿಸಿದೆ
ಮತ್ತು ಈ ಜಗತ್ತಿನಲ್ಲಿ ನಿಜವಾದ
ಗೆಳೆತನ ಬದುಕಿದೆ ಎಂದು ತೋರಿಸಿದೆ
ಸ್ನೇಹ ಎಂದರೆ ನನ್ನ ನಿನ್ನ ನಡುವಿನ ಸೇತುವೆ
ನಿನಗೆ ಬೇಸರ ಅನಿಸಿದರೆ
ಏಕಾಂಗಿ ಅನಿಸಿದರೆ
ಅದನ್ನು ದಾಟಿ ಬಾ
ಇನ್ನೊಂದು ದಡದಲ್ಲಿ ನಾನು ಕಾಯುತ್ತಿರುವೆ
ಸ್ನೇಹವೆಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಂಡಿದೆ
ಆದರೆ ನನಗೆ ಕಂಡಿದ್ದು ನೀನಾಗಿ,ನೀನೆ ಆಗಿ ...
ಅದ್ಯಾಕೆ ಗೊತ್ತಾ??
ಅಂಥಹ ಸ್ನೇಹಕ್ಕೆ ನಾನು ಕಾದಿದ್ದೆ
ಅದೆಷ್ಟೋ ವರ್ಷಾಂತರ...
ಬಂದ ಗೆಳೆತನಕ್ಕೂ ನಾ
ಬಯಸಿದ್ದಕ್ಕು ಇತ್ತು ಅಂತರ ..
ನ ಬಯಸಿದ್ದು ನಿನ್ನಲ್ಲಿತ್ತು ಒಪ್ಪಿಕೊಂಡೆ ..
ಇದು ನಿರಂತರ
ಗೆಳೆತನವೆಂದರೆ ಹೃದಯದ ಮಿಡಿತ
ಅಂತಾ ಎಲ್ಲೋ ಕೇಳಿದ್ದೆ .
ನಿನ್ನ ಸಾನಿಧ್ಯದಲ್ಲಿ ಅದನ್ನು ಅನುಭವಿಸಿದೆ
ಏಕೆಂದರೆ ನಾನು ನೊಂದಾಗ
ನೀನು ಮರುಗುತ್ತಿದ್ದೆ
ನನಗೆ ನೋವಾದಾಗ
ನೀ ಕೊರಗುತ್ತಿದ್ದೆ..
ಸ್ನೇಹವೆಂದರೆ ಬರಿ ಸಂಭ್ರಮವಲ್ಲ
ನನ್ನ ಹನಿ ಕಣ್ಣೀರು ಕೂಡ ನಿನ್ನ ಕಣ್ಣ
ಬೆಳಕು ಬಿದ್ದಾಗ ಕಾಮನಬಿಲ್ಲಾಗಬೇಕು
ನನ್ನದೆಯ ಬಿರುಗಾಳಿಯಾ ಆರ್ಭಟ
ತಡೆವ ಗೋಡೆಯಾಗಬೇಕು .
ನನ್ನ ಆರ್ಥನಾದವನ್ನು ನೀನು
ಮಧುರ ಜೆಂಕಾರವಗಿಸಬೇಕು
ಎಂದು ಬಯಸಿದ್ದೆ ನಾನು
ನಿಜವಾಗಿ ಮೂಡಿಬಂದೆ ನೀನು
ಸಂತೋಷಕ್ಕೆ ಸಾವಿರ ಸ್ನೇಹಿತರಿರುತ್ತಾರೆ
ಸಂಕಟಕ್ಕೆ ಬರುವವರು ಯಾರಿರುತ್ತಾರೆ?
ಅಂತ ಯೋಚಿಸುತ್ತಿದ್ದೆ ನಾನು
ನೋವಿನಿಂದ ಕರುಳು ಚೀರಿದಾಗ
ಹೇಳದೆ ಪಕ್ಕದಲ್ಲಿದ್ದೆಯಲ್ಲ ನೀನು
ನಿಜವೆಂದರೆ ನನೋಬ್ಳು ಶುದ್ಧ ದಡ್ಡಿ ...
ಸ್ನೇಹವ ಬಯಸಿದಷ್ಟು ತೀವ್ರವಾಗಿ
ಮರಳಿಸುವುದರಲ್ಲಿ ಬರೀ ದಂಡ
ನನಗೇ ಕೆಲವೊಮ್ಮೆ ನೋವಾಗುತ್ತದೆ
ನಿನ್ನ ನೋಯಿಸಿದೆನಲ್ಲಾ ಎಂದು
ಆದರೆ ನಿನ್ಯಾವತ್ತೂ ಪ್ರಶ್ನಿಸಲಿಲ್ಲ
ಹಾಗೇಕೆ ಎಂದು ಕೇಳಲಿಲ್ಲ
ಅರ್ಥಾ ಮಾಡ್ಕೋ ಅನ್ನಲಿಲ್ಲ
ನೋವು ಮಾಡಿದರು ಮರುಗಲಿಲ್ಲ
ಯಾಕೆಂದರೆ ನನ್ನೊಳಗೆ ನಿನ್ನ "ಸ್ನೇಹಿತೆ " ಇದ್ದಳಲ್ಲ
ನೀನು ಬದಲಾಗು ಎನ್ನಲಿಲ್ಲ
ಅವರಂತಾಗು, ಇವರಂತಾಗು ಎನ್ನಲಿಲ್ಲ
ನೀನು ನೀನಾಗು ಎಂದೆ.........
ಕೊನೆಯದಾಗಿ ಹೇಳೋದಿಷ್ಟೇ
ಥಾಂಕ್ಯೂ .....my dear friend.....
Subscribe to:
Posts (Atom)






